alex Certify
ಕನ್ನಡ ದುನಿಯಾ       Mobile App
       

Kannada Duniya

ಗುಡ್ ನ್ಯೂಸ್: ಬ್ಯಾಂಕ್ ಠೇವಣಿದಾರರ ಆತಂಕ ದೂರ ಮಾಡಿದ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರ ಜಾರಿಗೆ ತರಲು ನಿರ್ಧರಿಸಿದ್ದ ಎಫ್.ಆರ್.ಡಿ.ಎ. ವಿಧೇಯಕವನ್ನು ಹಿಂಪಡೆಯಲು ಈಗ ನಿರ್ಧರಿಸಲಾಗಿದ್ದು, ಇದರಿಂದಾಗಿ ಬ್ಯಾಂಕ್ ಠೇವಣಿದಾರರ ಆತಂಕ ದೂರವಾದಂತಾಗಿದೆ.

ಬ್ಯಾಂಕಿಂಗ್ ವಲಯಕ್ಕೆ ಸಂಬಂಧಿಸಿದಂತೆ ಈ ವಿಧೇಯಕವನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದ್ದು, ಇದರಲ್ಲಿನ ಕೆಲವು ಅಂಶಗಳು ಬ್ಯಾಂಕ್ ನಲ್ಲಿ ಠೇವಣಿ ಇಟ್ಟವರ ಆತಂಕಕ್ಕೆ ಕಾರಣವಾಗಿತ್ತು.

ಬ್ಯಾಂಕ್ ದಿವಾಳಿಯಾಗುವ ಸಂದರ್ಭ ಬಂದರೆ ಇದನ್ನು ತಪ್ಪಿಸಲು ಠೇವಣಿದಾರರ ಠೇವಣಿ ಹಣವನ್ನೂ ಬಳಸಿಕೊಳ್ಳಲು ಅನುಕೂಲವಾಗುವ ಪ್ರಸ್ತಾಪ ಈ ವಿಧೇಯಕದಲ್ಲಿತ್ತು.

ವಿರೋಧದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಈಗ ವಿಧೇಯಕವನ್ನು ಹಿಂಪಡೆಯಲು ನಿರ್ಧರಿಸಿರುವುದರಿಂದ ಠೇವಣಿದಾರರು ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...