alex Certify
ಕನ್ನಡ ದುನಿಯಾ       Mobile App
       

Kannada Duniya

2 ಸಾವಿರ ರೂ. ನೋಟಿನ ಬಗ್ಗೆ ಮಹತ್ವದ ಮಾಹಿತಿ ನೀಡಿದ ಕೇಂದ್ರ ಸರ್ಕಾರ

ಸರ್ಕಾರ 2 ಸಾವಿರ ನೋಟಿನ ಬಗ್ಗೆ ಮತ್ತೊಮ್ಮೆ ಸ್ಪಷ್ಟನೆ ನೀಡಿದೆ. 2 ಸಾವಿರ ರೂಪಾಯಿ ನೋಟನ್ನು ಹಿಂಪಡೆಯುವುದಿಲ್ಲವೆಂದು ಸರ್ಕಾರ ತಿಳಿಸಿದೆ. 2 ಸಾವಿರ ರೂಪಾಯಿ ನೋಟು ರದ್ದಾಗಲಿದೆ ಎಂಬ ಸುದ್ದಿ ಹರಡಿತ್ತು. ಇದ್ರ ಜೊತೆಗೆ 2 ಸಾವಿರ ರೂಪಾಯಿ ನೋಟಿನ ಮುದ್ರಣ ಬಂದ್ ಆಗಿದೆ ಎಂಬ ಸಂಗತಿಯೂ ಹೊರಬಿದ್ದಿತ್ತು. ಇದ್ರಿಂದ ಜನರು ಆತಂಕಗೊಂಡಿದ್ರು.

ಈ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಮತ್ತೊಮ್ಮೆ ಸ್ಪಷ್ಟನೆ ನೀಡಿದೆ. 2 ಸಾವಿರ ರೂಪಾಯಿ ನೋಟು ರದ್ದಾಗುವುದಿಲ್ಲವೆಂದಿದೆ. ಈ ಮಧ್ಯೆ ರಿಸರ್ವ್ ಬ್ಯಾಂಕ್ ನೋಟು ನಿಷೇಧದ ವೇಳೆ ಜಮೆಯಾದ ನೋಟುಗಳ ಪರಿಶೀಲನೆ ಪೂರ್ಣಗೊಳಿಸಿದ್ದು, ಎಲ್ಲ ನೋಟುಗಳನ್ನು ನಷ್ಠಗೊಳಿಸಿದೆ.

ನವೆಂಬರ್ 2016 ರಲ್ಲಿ  ಸಾವಿರ ಹಾಗೂ ಐದು ನೂರು ರೂಪಾಯಿ ನೋಟುಗಳನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿತ್ತು. ಜನರು ಬ್ಯಾಂಕ್ ಮುಂದೆ ಕ್ಯೂನಲ್ಲಿ ನಿಂತು ನೋಟು ಬದಲಿಸಿಕೊಂಡಿದ್ದರು. 2016ರಲ್ಲಿ 15.44 ಲಕ್ಷ ಕೋಟಿ 500 ಹಾಗೂ 1000 ರೂಪಾಯಿ ನೋಟು ಜಮೆಯಾಗಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...