alex Certify
ಕನ್ನಡ ದುನಿಯಾ       Mobile App
       

Kannada Duniya

ಏರ್ ಪೋರ್ಟ್ ಗಳಲ್ಲಿನ್ನು ಕೈಗೆಟಕುವ ದರದಲ್ಲಿ ಸಿಗಲಿದೆ ಟೀ, ಕಾಫಿ

ನವದೆಹಲಿ: ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಕಪ್ ಕಾಫಿ-ಟೀಗೆ ದುಬಾರಿ ಹಣ ತೆರುವ ಪಡಿಪಾಟಲಿಗೆ ಕೊನೆ ಹಾಡಲು ಏರ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಮುಂದಾಗಿದೆ.

ದೇಶದಲ್ಲಿ ಸರ್ಕಾರದಿಂದ ನಿರ್ವಹಿಸಲ್ಪಡುತ್ತಿರುವ ವಿಮಾನ ನಿಲ್ದಾಣಗಳಲ್ಲಿ ಎಂ.ಆರ್.ಪಿ. (ಗರಿಷ್ಠ ಮಾರಾಟ ಬೆಲೆ) ದರದಲ್ಲಿ ನೀರು ಹಾಗೂ ಕಡಿಮೆ ಬೆಲೆಯಲ್ಲಿ ಚಹಾ ಮತ್ತು ತಿಂಡಿ ತಿನಿಸುಗಳು ಪ್ರಯಾಣಿಕರಿಗೆ ಲಭ್ಯವಾಗುವ ಕೌಂಟರ್ ತೆರೆಯಲಾಗುತ್ತದೆ ಎಂದು ಎಎಐ ತಿಳಿಸಿದೆ.

ಇಂದು ವಿಮಾನ ಪ್ರಯಾಣ ಎಂಬುದು ಕೇವಲ ಶ್ರೀಮಂತ ವರ್ಗಕ್ಕೆ ಮೀಸಲಾಗಿಲ್ಲ. ಸಾಮಾನ್ಯರೂ ಕೂಡ ಹೆಚ್ಚಿನ ಪ್ರಮಾಣದಲ್ಲಿ ಈ ಸೇವೆ ಬಳಸಿಕೊಳ್ಳುತ್ತಿದ್ದಾರೆ. ಇದೇ ವೇಳೆ ವಿಮಾನ ನಿಲ್ದಾಣದಲ್ಲಿ ಮಾರಾಟವಾಗುವ ತಿಂಡಿ-ತಿನಿಸುಗಳಿಗೆ ಅತಿ ದುಬಾರಿ ಹಣ ತೆರಬೇಕಾಗಿದೆ ಎಂದು ಸಾರ್ವಜನಿಕರಿಂದ ದೂರು ಸಾಮಾನ್ಯ ಎಂಬಂತಾಗಿತ್ತು.

ಸಂಸದರೂ ಸಹ ಅನೇಕ ಬಾರಿ ಸಂಸತ್ ನಲ್ಲಿ ವಿಚಾರ ಪ್ರಸ್ತಾಪಿಸಿದ್ದಿದೆ. ಈಗ ಪುನಃ ಇದೇ ವಿಚಾರ ಪ್ರತಿಧ್ವನಿಸಿದೆ. ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಏರ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾ (ಎಎಐ) ಮಹತ್ವದ ನಿರ್ಧಾರಕ್ಕೆ ಬಂದಿದೆ.

ಖಾಸಗಿಯಿಂದ ನಿರ್ವಹಿಸಲ್ಪಡುತ್ತಿರುವ ಬೆಂಗಳೂರು, ದೆಹಲಿ, ಮುಂಬೈ ಸೇರಿ 90 ಕ್ಕೂ ವಿಮಾನ ನಿಲ್ದಾಣಗಳಲ್ಲಿ ಈ ರೀತಿಯ ಪ್ರತ್ಯೇಕ ಕೌಂಟರ್ ಶೀಘ್ರ ಆರಂಭವಾಗಲಿದೆ ಎಂದು ಎಎಐ ಅಧಿಕಾರಿಗಳು ತಿಳಿಸಿದ್ದಾರೆ.

ಉಡಾನ್ ಯೋಜನೆ ಜಾರಿಯಾದ ಬಳಿಕ ಎಲ್ಲಾ ವರ್ಗದ ಜನರು ವಿಮಾನ ಯಾನ ಸೇವೆಯನ್ನು ಹೆಚ್ಚು ಬಳಸಿಕೊಳ್ಳುತ್ತಿದ್ದಾರೆ. ಹೀಗಾಗಿ ಕಾಫಿ-ಟೀ, ತಿಂಡಿಗಳು ಕೈಗೆಟುಕುವ ದರದಲ್ಲಿ ಹಾಗೂ ಕುಡಿಯುವ ನೀರು ಎಂ.ಆರ್.ಪಿ. ದರದಲ್ಲಿ ಲಭ್ಯವಾದರೆ ಹೆಚ್ಚು ಜನರಿಗೆ ಅನುಕೂಲವಾಗಲಿದೆ ಎಂದು ವಿವರಿಸಿದ್ದಾರೆ.

ಅಂದ ಹಾಗೆ ಜುಲೈ ತಿಂಗಳೊಂದರಲ್ಲೇ ದೇಶದೊಳಗೆ ವಿಮಾನಯಾನ ಮಾಡಿದ ಪ್ರಯಾಣಿಕರ ಸಂಖ್ಯೆ 11.6 ಮಿಲಿಯನ್ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ ವರದಿ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...