alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಯಾಶ್ಲೆಸ್ ವ್ಯವಹಾರಗಳ ಮೇಲೆ ಹದ್ದಿನ ಕಣ್ಣಿಡಲಿದೆ RBI

ಕಪ್ಪು ಹಣದ ವಿರುದ್ಧ ಸಮರ ಸಾರಿರುವ ಆರ್ ಬಿ ಐ ಮಹತ್ವದ ಕಾನೂನೊಂದನ್ನ ಜಾರಿಗೆ ತರೋಕೆ ಚಿಂತನೆ ನಡೆಸಿದೆ. ದೇಶದ ನಗದುರಹಿತ ವಹಿವಾಟಿನ ಮೇಲೆ ಕಣ್ಣಿಡಲು ನಿರ್ಧರಿಸಿದೆ. ಮನಿಲಾಂಡ್ರಿಂಗ್ ಪ್ರಕರಣಗಳು ದಿನೇ ದಿನೇ ಹೆಚ್ಚಾಗ್ತಿರೋ ಹಿನ್ನಲೆಯಲ್ಲಿ ಆರ್ಬಿಐ ದೇಶದ ಎಲ್ಲಾ ಕ್ಯಾಶ್ಲೆಸ್ ವ್ಯವಹಾರಗಳ ಮೇಲೆ ನಿಗಾ ಇಡುವ ವ್ಯವಸ್ಥೆಯನ್ನ ಜಾರಿಗೆ ತರಲು ಚಿಂತನೆ ನಡೆಸಿದೆ.

ಕೆಲ ಸಂಸ್ಥೆಗಳು ವಾಮಮಾರ್ಗದಲ್ಲಿ ಮನಿ ಲಾಂಡ್ರಿಂಗ್ ನಡೆಸುತ್ತಿರೋದ್ರ ಹಿನ್ನಲೆಯಲ್ಲಿ ಅಕ್ರಮಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಆರ್ ಬಿ ಐ ಯೋಚಿಸುತ್ತಿದೆ. ಈ ಸಂಬಂಧ ಕೇಂದ್ರ ಆರ್ಥಿಕ ಸಚಿವಾಲಯ ಮತ್ತು ಆರ್ ಬಿ ಐ ನಡುವೆ ಮಹತ್ವದ ಮಾತುಕತೆ ನಡೆದಿದೆ.

ಅದಾಯ ತೆರಿಗೆ ಇಲಾಖೆ ಮತ್ತು ಕೇಂದ್ರ ತನಿಖಾ ತಂಡಗಳು ದೇಶದಲ್ಲಿ ಹದ್ದು ಮೀರಿ ನಡೀತಿರೋ ಮನಿ ಲಾಂಡ್ರಿಂಗ್ ಬಗ್ಗೆ ಕಳವಳ ವ್ಯಕ್ತಪಡಿಸಿದ ಬೆನ್ನಲ್ಲೇ ಆರ್ ಬಿ ಐ ಇಂತದ್ದೊಂದು ಕ್ರಮಕ್ಕೆ ಮುಂದಾಗಿದೆ. ಕ್ಯಾಶ್ಲೆಸ್ ವ್ಯವಹಾರಗಳ ಸಂಪೂರ್ಣ ದಾಖಲೆಗಳನ್ನ ಒಳಗೊಂಡ ವ್ಯವಸ್ಥೆಯ ರೂಪುರೇಷೆ ಹೇಗಿರಬೇಕು.? ಯಾವ ಮಾನದಂಡಗಳ ಆಧಾರದಲ್ಲಿ ಸಂಸ್ಥೆ ಕಾರ್ಯನಿರ್ವಹಿಸಬೇಕು ಅನ್ನೊ ಮಾತುಕತೆಗಳು ನಡೆದಿವೆ. ಈ ಸಂಬಂಧ ಆರ್ ಬಿ ಐ ದೇಶದ ಎಲ್ಲಾ ಬ್ಯಾಂಕ್ ಗಳಿಗೆ ಗ್ರಾಹಕರ ಮತ್ತು ಸಂಸ್ಥೆಗಳ ವಹಿವಾಟಿನ ದಾಖಲೆಗಳನ್ನ ಕೇಳುವ ಸಂಭವ ಇದೆ ಅಂತ ಹೇಳಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...