alex Certify
ಕನ್ನಡ ದುನಿಯಾ       Mobile App
       

Kannada Duniya

‘ಚಿನ್ನ’ ಖರೀದಿದಾರರಿಗೆ ‘ಸಿಹಿ’ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ

ಚಿನ್ನ ಖರೀದಿಸುವ ಭಾರತೀಯರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ದುಬಾರಿ ಬೆಲೆ ತೆತ್ತು ಚಿನ್ನ ಖರೀದಿಸಿದರೂ ಪರಿಶುದ್ಧ ಚಿನ್ನ ಸಿಗಲಿಲ್ಲವೆಂಬ ಖರೀದಿದಾರರ ಕೊರಗನ್ನು ನಿವಾರಿಸಲು ಸರ್ಕಾರ ಮುಂದಾಗಿದೆ.

ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಖಾತೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ಈ ವಿಚಾರ ತಿಳಿಸಿದ್ದು, ದೇಶದಲ್ಲಿ ಮಾರಾಟವಾಗುವ ಎಲ್ಲ ಚಿನ್ನಾಭರಣಗಳಿಗೆ ಹಾಲ್ ಮಾರ್ಕಿಂಗ್ ಕಡ್ಡಾಯಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದಿದ್ದಾರೆ.

ಚಿನ್ನದ ಪರಿಶುದ್ಧತೆಯನ್ನು ಪ್ರಮಾಣೀಕರಿಸುವ ಹಾಲ್ ಮಾರ್ಕ್ ಚಿಹ್ನೆ ಇದ್ದರೆ ಗ್ರಾಹಕರು ಖರೀದಿಸುವ ಚಿನ್ನಕ್ಕೆ ಪರಿಶುದ್ಧತೆಯ ಪ್ರಮಾಣತೆ ಲಭ್ಯವಾಗಲಿದ್ದು, ಮರು ಮಾರಾಟಕ್ಕೆ ಮುಂದಾದ ಸಂದರ್ಭದಲ್ಲೂ ಉತ್ತಮ ಬೆಲೆ ಸಿಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...