alex Certify
ಕನ್ನಡ ದುನಿಯಾ       Mobile App
       

Kannada Duniya

ಜಿ.ಎಸ್.ಟಿ. ನೋಂದಾಯಿತ ಸಣ್ಣ ಉದ್ದಿಮೆದಾರರಿಗೆ ಮೋದಿ ಸರ್ಕಾರದಿಂದ ‘ಬಂಪರ್’ ನ್ಯೂಸ್

ನವದೆಹಲಿ: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಕೇಂದ್ರ ಸರ್ಕಾರ ಹಲವು ರೀತಿಯ ಆಕರ್ಷಕ ಯೋಜನೆಗಳನ್ನು ಜನತೆಗೆ ಪರಿಚಯಿಸುತ್ತಿದೆ.

ಇದರ ಮುಂದುವರಿದ ಭಾಗವಾಗಿ ಈಗ ಜಿ.ಎಸ್.ಟಿ. ನೋಂದಾಯಿತ ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರಿಗೆ ಇನ್ಶುರೆನ್ಸ್ ಯೋಜನೆಯನ್ನು ಅನುಷ್ಠಾನಗೊಳಿಸಲು ಮುಂದಾಗಿದೆ. ಇದರ ಪ್ರಯೋಜನವನ್ನು ಲಕ್ಷಾಂತರ ಉದ್ದಿಮೆದಾರರು ಪಡೆಯಲಿದ್ದಾರೆ.

ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ (ಪಿ.ಎಂ.ಎಸ್.ಬಿ.ವೈ.) ಫಲಾನುಭವಿಗಳಿಗೆ ಅಪಘಾತ ವಿಮೆ ದೊರೆಯಲಿದೆ. ಈ ಯೋಜನೆಯನ್ನು ಈಗಾಗಲೇ ಉತ್ತರ ಪ್ರದೇಶ ಸರ್ಕಾರ ಅನುಷ್ಠಾನಕ್ಕೆ ತಂದಿದೆ. ಅದರ ಆಧಾರದ ಮೇಲೆ ದೇಶಾದ್ಯಂತ ವಿಸ್ತರಣೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.

ಈ ಯೋಜನೆಯಿಂದ ಸಣ್ಣ ಉದ್ದಿಮೆದಾರರು ಹತ್ತು ಲಕ್ಷ ರೂಪಾಯಿವರೆಗೆ ಅಪಘಾತ ವಿಮೆಯ ಪ್ರಯೋಜನ ಪಡೆಯಬಹುದು. ಪ್ರಸಕ್ತ ಸಾಲಿನ ಆಯವ್ಯಯ ಮಂಡಿಸುವ ಮೊದಲು ಅಂದರೆ ಈ ಮಾಸಾಂತ್ಯದೊಳಗೆ ಯೋಜನೆಯನ್ನು ಕೇಂದ್ರ ಘೋಷಿಸುವ ಸಾಧ್ಯತೆ ಇದೆ.

ಪಿ.ಎಂ.ಎಸ್.ಬಿ.ವೈ.ಯಡಿ ಈಗಾಗಲೇ ಎರಡು ಲಕ್ಷ ಅಪಘಾತ ವಿಮೆ ಸೌಕರ್ಯ ಲಭ್ಯವಿದೆ. ಇದಕ್ಕೆ ವರ್ಷಕ್ಕೆ ಕೇವಲ ಹನ್ನೆರಡು ರುಪಾಯಿ ಕಟ್ಟಿದರೆ ಸಾಕು. 18 ರಿಂದ 70 ವರ್ಷದವರಿಗೆ ಈ ಯೋಜನೆ ಲಭ್ಯವಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...