alex Certify
ಕನ್ನಡ ದುನಿಯಾ       Mobile App
       

Kannada Duniya

ಇಂಧನದ ಮೇಲಿನ ಸುಂಕ ಇಳಿಕೆಗೆ ಕೇಂದ್ರ ನಕಾರ

ಪೆಟ್ರೋಲ್‌ ಹಾಗೂ ಡೀಸಲ್‌ ಬೆಲೆಯ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸದೇ ಇರಲು ಕೇಂದ್ರ ಸರಕಾರ ತೀರ್ಮಾನಿಸಿದೆ.

ದಿನದಿಂದ ದಿನಕ್ಕೆ ತೈಲ ಬೆಲೆ ಗಗನಮುಖಿಯಾಗಿದ್ದರೂ, ಸರಕಾರ ವಿಧಿಸಿರುವ ಸುಂಕವನ್ನು ಕಡಿತಗೊಳಿಸಲು ಸಿದ್ದವಾಗಿಲ್ಲ. ಇದರಿಂದ ಆದಾಯಕ್ಕೆ ಬೃಹತ್‌ ಪ್ರಮಾಣದ ಕಡಿತವಾಗುತ್ತದೆ. ಡಾಲರ್‌ ಎದುರು ರೂಪಾಯಿ ಕುಸಿತವಾಗಿರುವ ಹಿನ್ನೆಲೆಯಲ್ಲಿ ಬೆಲೆ ಏರಿಕೆಯಾಗುತ್ತಿದೆ. ಅಬಕಾರಿ ತೆರಿಗೆ ಕಡಿತಗೊಳಿಸುವುದು ರಾಷ್ಟ್ರದ ಹಣಕಾಸಿನ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಹೀಗಾಗಿ ಸುಂಕ ಕಡಿತ ಮಾಡುವುದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಚುನಾವಣೆಯ ಸಂದರ್ಭದಲ್ಲಿ ಇಂತಹ ನಿರ್ಧಾರ ಪಕ್ಷದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿದ್ದರೂ, ದೇಶದ ಅಭಿವೃದ್ಧಿಯ ನಿಟ್ಟಿನಲ್ಲಿ ಒಳಿತಾಗಲಿದೆ. ವಿವಿಧ ಯೋಜನೆಗಳಿಗೆ ಇಂಧನದ ತೆರಿಗೆ ಹಣ ವಿನಿಯೋಗವಾಗುತ್ತಿರುವುದರಿಂದ ಸುಂಕ ಇಳಿಕೆ ಕಷ್ಟಕರ ಎನ್ನಲಾಗ್ತಿದೆ. ಮಂಗಳವಾರವೂ ರೂಪಾಯಿ, ಡಾಲರ್‌ ಎದುರು ಕುಸಿತ ಕಂಡಿದ್ದು, ಒಂದು ಡಾಲರ್‌ಗೆ 71.54 ರೂ. ಇದೆ. ಇದರಿಂದ ಆಮದಿನ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿದೆ.

ದೆಹಲಿಯಲ್ಲಿ ಪೆಟ್ರೋಲ್‌ ಪ್ರತಿ ಲೀಟರ್‌ಗೆ 79.31 ಇದ್ದು(0.39ರೂ. ಹೆಚ್ಚಳ) ಡೀಸಲ್‌ಗೆ 71.34 ರೂ. ನಿಗದಿಯಾಗಿದೆ. ಪೆಟ್ರೋಲ್‌ ದರದ ಅರ್ಧದಷ್ಟು ದರ ತೆರಿಗೆಯೇ ಆಗಿದ್ದು, 19.48 ರೂ. ಸುಂಕ ವಿಧಿಸಲಾಗಿದೆ. ಡೀಸಲ್‌ನ ಮೇಲೆ 15.33 ರೂ. ವಿಧಿಸಲಾಗಿದೆ. ಇದಲ್ಲದೆ ಆಯಾ ರಾಜ್ಯದಲ್ಲಿನ ವ್ಯಾಟ್‌ ಸೇರಿಕೊಳ್ಳುತ್ತದೆ. ಮುಂಬಯಿನಲ್ಲಿ ವ್ಯಾಟ್‌ ಶೇ.39.12 ಇದ್ದು ದೇಶದಲ್ಲೇ ಅತ್ಯಧಿಕವಾಗಿದೆ. ಕೇಂದ್ರ ಸರಕಾರ 9 ಕಂತುಗಳಲ್ಲಿ ಅಬಕಾರಿ ಸುಂಕವನ್ನು ಏರಿಕೆ ಮಾಡಿತ್ತು. ಒಟ್ಟಾರೆ ಪೆಟ್ರೋಲ್‌ಗೆ 11.77 ರೂ. ಹಾಗೂ ಡೀಸೆಲ್‌ಗೆ 13.47 ರೂ. ಸುಂಕ ಹೆಚ್ಚಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...