alex Certify
ಕನ್ನಡ ದುನಿಯಾ       Mobile App
       

Kannada Duniya

16 ರಿಂದ 18 ವರ್ಷದೊಳಗಿನ ಅಪ್ರಾಪ್ತರಿಗೆ ಗುಡ್ ನ್ಯೂಸ್

ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ 18 ವರ್ಷದೊಳಗಿನ ಅಪ್ರಾಪ್ತರಿಗೆ ಒಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. 16 ರಿಂದ 18 ವರ್ಷದ ಅಪ್ರಾಪ್ತರು ಎಲೆಕ್ಟ್ರಿಕ್ ಸ್ಕೂಟರ್ ಸವಾರಿ ಮಾಡಲು ಡ್ರೈವಿಂಗ್ ಲೈಸೆನ್ಸ್ ನೀಡುವುದಾಗಿ ತಿಳಿಸಿದ್ದಾರೆ.

1988 ರ ಪ್ರಸ್ತುತ ಮೋಟಾರು ವಾಹನ ಕಾಯಿದೆ ಅಡಿಯಲ್ಲಿ 16 ರಿಂದ 18 ರೊಳಗಿನ ಅಪ್ರಾಪ್ತರು ಗೇರ್ ರಹಿತ ಸ್ಕೂಟರ್ ಚಾಲನೆಗೆ ಮಾತ್ರ ಪರವಾನಗಿ ನೀಡಲು ಅವಕಾಶ ನೀಡುವುದಾಗಿ ತಿಳಿಸಿದ್ದಾರೆ.

ಈ ಎಲೆಕ್ಟ್ರಿಕ್ ವಾಹನಗಳಿಗೆ ಗ್ರೀನ್ ಲೈಸೆನ್ಸ್ ಪ್ಲೇಟ್ ನೀಡಲಾಗ್ತಿದೆ. ಜನರು ವಿದ್ಯುತ್ ಚಾಲಿತ ವಾಹನಗಳನ್ನು ಬಳಸುವಂತೆ ಪ್ರೋತ್ಸಾಹಿಸಲು ಈ ಬಣ್ಣದ ನಂಬರ್ ಪ್ಲೇಟ್ ನೀಡಲಾಗ್ತಿದೆ ಎಂದು ಸಚಿವ ಗಡ್ಕರಿ ತಿಳಿಸಿದ್ದಾರೆ.

ಈ ಗ್ರೀನ್ ಪ್ಲೇಟ್ ಎಲೆಕ್ಟ್ರಿಕ್ ವಾಹನಗಳಿಂದ ಹಲವು ಪ್ರಯೋಜನಗಳಿವೆಯಂತೆ. ಪಾರ್ಕಿಂಗ್ ಗಳಲ್ಲಿ ಸ್ಥಳಾವಕಾಶ, ಟೋಲ್ ಗಳಲ್ಲಿ ರಿಯಾಯಿತಿ ಪಡೆಯಬಹುದಂತೆ. ಒಟ್ನಲ್ಲಿ ಎಲೆಕ್ಟ್ರಿಕಲ್ ವಾಹನಗಳನ್ನು ಬಳಸುವ ಅಪ್ರಾಪ್ತರಿಗೂ ಸರ್ಕಾರ ಲೈಸೆನ್ಸ್ ನೀಡಲು ಮುಂದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...