alex Certify
ಕನ್ನಡ ದುನಿಯಾ       Mobile App
       

Kannada Duniya

ಈ ವಾಹನ ಖರೀದಿಸುವವರಿಗೆ ಸಿಗ್ತಿದೆ ಭಾರೀ ಸಬ್ಸಿಡಿ

ವಾಯುಮಾಲಿನ್ಯ ತಡೆಗೆ ನಾನಾ ಸರ್ಕಸ್ ಮಾಡುತ್ತಿರುವ ಸಾರಿಗೆ ಇಲಾಖೆ, ಈಗ ಕಾರು ಪ್ರಿಯರ ಓಲೈಕೆಗೆ ಮುಂದಾಗಿದೆ. ಭಾರತದ ಮಾರುಕಟ್ಟೆಯಲ್ಲಿ ಇಲ್ಲದೆ ಇರುವಂತಾ ಕಾರುಗಳು ಸೇರಿದಂತೆ ಎಲೆಕ್ಟ್ರಿಕಲ್ ಕಾರುಗಳ ಖರೀದಿಗೆ 1 ಲಕ್ಷ 40 ಸಾವಿರ ರೂಪಾಯಿಗಳ ನೇರ ಸಬ್ಸಿಡಿಯನ್ನ ಘೋಷಿಸಿದೆ. ಕೇವಲ ಕಾರುಗಳಿಗೆ ಮಾತ್ರವಲ್ಲ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೂ ಸಬ್ಸಿಡಿ ಘೋಷಣೆ ಮಾಡಿದೆ.

ಸದ್ಯ ಭಾರತದಲ್ಲಿ ಲಭ್ಯವಿರುವ ಎಲೆಕ್ಟ್ರಿಕಲ್ ಕಾರುಗಳೆಂದರೆ ಮಹೀಂದ್ರಾ ಮತ್ತು ಟಾಟಾ. ಟಾಟಾ ಮತ್ತು ಮಹೀಂದ್ರಾ ಸಂಸ್ಥೆಯ ಅತ್ಯುನ್ನತ ಶ್ರೇಣಿಯ ಕಾರುಗಳ ಹೊರತಾಗಿ ವಿದೇಶಿ ಎಲೆಕ್ಟ್ರಿಕಲ್ ಕಾರುಗಳಿಗೆ ಕೂಡ ಸರ್ಕಾರ ಸಬ್ಸಿಡಿ ಘೋಷಣೆ ಮಾಡಿದೆ. ಕಾರುಗಳ ಒಟ್ಟಾರೆ ದರದ ಶೇಕಡಾ 20ರಷ್ಟು ಹಣ ಸಬ್ಸಿಡಿ ರೂಪದಲ್ಲಿ ಮಾಲೀಕರಿಗೆ ದೊರೆಯಲಿದೆ.

ಸರ್ಕಾರಿ ಹಣಕಾಸು ವಿನಿಯೋಗ ಇಲಾಖೆಯ ಉನ್ನತಾಧಿಕಾರಿಗಳ ನಡುವಿನ ಸಭೆಯಲ್ಲಿ ಹೀಗೊಂದು ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಈ ಹಿಂದೆ ನಡೆದ ಸಭೆಯಲ್ಲಿ ಈ ಯೋಜನೆ ಜಾರಿಗೊಳ್ಳೋದಕ್ಕೆ ಕನಿಷ್ಠ 4000 ಕೋಟಿ ಅಗತ್ಯ ಇದೆ ಅನ್ನೋ ತೀರ್ಮಾನಕ್ಕೆ ಬರಲಾಗಿತ್ತು. ಆದ್ರೆ ಇತ್ತೀಚೆಗೆ ನಡೆದ ಸಭೆಯಲ್ಲಿ ಯೋಜನೆ ಅನುಷ್ಠಾನಕ್ಕೆ 5500 ಕೋಟಿ ಅಂದಾಜು ವೆಚ್ಚ ಬೇಕಾಗಲಿದೆ ಅಂತ ಕೇಂದ್ರ ಕ್ಯಾಬಿನೆಟ್ ಕಮಿಟಿಗೆ ಶಿಫಾರಸ್ಸು ಮಾಡಲಾಗಿದೆ.
ಈ ಹಿಂದೆ ಕೇವಲ ಸರ್ಕಾರಿ ವಾಹನಗಳಲ್ಲಷ್ಟೇ ಈ ಯೋಜನೆಯನ್ನ ಜಾರಿಗೊಳಿಸೋದಕ್ಕೆ ತೀರ್ಮಾನಿಸಲಾಗಿತ್ತು. ಆದ್ರೆ ಈಗ ಖಾಸಗಿ ವಲಯಕ್ಕೂ ಈ ಯೋಜನೆಯನ್ನ ಜಾರಿಗೊಳಿಸೋಕೆ ನಿರ್ಧರಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...