alex Certify
ಕನ್ನಡ ದುನಿಯಾ       Mobile App
       

Kannada Duniya

ಆಧಾರ್ ಮಾಹಿತಿ ಸೋರಿಕೆ ತಡೆಯಲು ಬಂದಿದೆ ವರ್ಚುವಲ್ ಐಡಿ

ಅಕ್ರಮವಾಗಿ ಆಧಾರ್ ಮಾಹಿತಿಯನ್ನೇ ಮಾರಾಟ ಮಾಡ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಎಚ್ಚೆತ್ತುಕೊಂಡಿದೆ. ಆಧಾರ್ ಕಾರ್ಡ್ ಹೊಂದಿರುವವರ ವೈಯಕ್ತಿಕ ಮಾಹಿತಿ ಸೋರಿಕೆಯನ್ನು ತಡೆಯಲು ವರ್ಚುವಲ್ ಐಡಿಯನ್ನು ಪರಿಚಯಿಸಿದೆ.

ಆಧಾರ್ ಕಾರ್ಡ್ ಹೊಂದಿರುವವರು ಇನ್ಮೇಲೆ ತಮ್ಮ ಡೇಟಾವನ್ನು ರಕ್ಷಿಸಿಕೊಳ್ಳಲು UIDAI ವೆಬ್ ಸೈಟ್ ನಿಂದ ವರ್ಚುವಲ್ ಐಡಿ ಪಡೆದುಕೊಳ್ಳಬೇಕು ವರ್ಚುವಲ್ ಐಡಿ 16 ಸಂಖ್ಯೆಯನ್ನು ಹೊಂದಿದೆ. ಆಧಾರ್ ಸಂಖ್ಯೆ ಜೊತೆ ಇದನ್ನು ಕೂಡ ಬಳಸಬಹುದು.

ಇದರಲ್ಲಿ ಹೆಸರು, ವಿಳಾಸ ಮತ್ತು ಫೋಟೋ ಮಾತ್ರ ಇರುತ್ತದೆ. ಹಾಗಾಗಿ ಅಗತ್ಯ ದಾಖಲೆಯಾಗಿ ಇದನ್ನು ಬಳಸಿದ್ರೂ ಡೇಟಾ ಸೋರಿಕೆಯಾಗುವ ಭಯವಿರುವುದಿಲ್ಲ. ಆಧಾರ್ ಹೊಂದಿರುವವರ ಹಲವು ವರ್ಚುವಲ್ ಐಡಿ ಪಡೆಯಲು ಅವಕಾಶ ನೀಡಲಾಗಿದೆ. ಹೊಸ ಐಡಿ ಪಡೆದಾಗ ಹಳೆಯದು ತಂತಾನೇ ರದ್ದಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...