alex Certify
ಕನ್ನಡ ದುನಿಯಾ       Mobile App
       

Kannada Duniya

ಗುಡ್ ನ್ಯೂಸ್: ಶೇ.8ಕ್ಕೆ ಮುಟ್ಟಿದ ಜಿಪಿಎಫ್ ಬಡ್ಡಿದರ

ನವದೆಹಲಿ: ಕೇಂದ್ರ ಸರ್ಕಾರವು ಜನರಲ್ ಪ್ರಾವಿಡೆಂಟ್ ಫಂಡ್ (ಜಿಪಿಎಫ್) ಹಾಗೂ ಸಂಬಂಧಿತ ಇತರ ಯೋಜನೆಗಳ ಮೇಲಿನ ಬಡ್ಡಿದರವನ್ನು ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕ ಅವಧಿಗೆ ಶೇ.0.4ರಷ್ಟು ಏರಿಸಿದ್ದರಿಂದ ಈಗ ಬಡ್ಡಿದರ ಶೇ. 8ಕ್ಕೆ ತಲುಪಿದೆ. ಈ ಮೂಲಕ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಗೆ ಸಮಾನವಾದ ಬಡ್ಡಿದರವನ್ನು ನಿಗದಿಪಡಿಸಿದಂತಾಗಿದೆ.

2018-19ರ ಜುಲೈ-ಸೆಪ್ಟೆಂಬರ್ ನ ತ್ರೈಮಾಸಿಕ ಅವಧಿಯಲ್ಲಿ ಜಿಪಿಎಫ್ ಬಡ್ಡಿದರ ಶೇ. 7.6 ಇತ್ತು. ಈ ಹೊಸ ಬಡ್ಡಿದರವು 2018ರ ಅಕ್ಟೋಬರ್ 1ರಿಂದಲೇ ಅನ್ವಯವಾಗಲಿದ್ದು, ಡಿಸೆಂಬರ್ 31ಕ್ಕೆ ಕೊನೆಗೊಳ್ಳಲಿದೆ.

ಕೇಂದ್ರ ಸರ್ಕಾರಿ ನೌಕರರು, ರೈಲ್ವೆ ಮತ್ತು ರಕ್ಷಣಾ ಸಿಬ್ಬಂದಿಗೆ ಬಡ್ಡಿದರ ಅನ್ವಯವಾಗಲಿದೆ. ಅಕ್ಟೋಬರ್-ಡಿಸೆಂಬರ್ ಅವಧಿಗೆ ಎನ್ ಎಸ್ ಸಿ ಮತ್ತು ಪಿಪಿಎಫ್ ಸೇರಿ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಶೇ. 0.4 ರಷ್ಟು ಏರಿಸುವುದಾಗಿ ಕೇಂದ್ರವು ಕಳೆದ ತಿಂಗಳೇ ಘೋಷಿಸಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...