alex Certify
ಕನ್ನಡ ದುನಿಯಾ       Mobile App
       

Kannada Duniya

10 ರೂ. ನಾಣ್ಯದ ಕುರಿತು ಮಹತ್ವದ ನಿರ್ಧಾರ ಕೈಗೊಂಡ ಸರ್ಕಾರ

ಮಾರುಕಟ್ಟೆಯಲ್ಲಿರುವ ಎಲ್ಲ 10 ರೂಪಾಯಿ ನಾಣ್ಯಗಳು ಅಸಲಿ ಎಂದು ಕೇಂದ್ರ ಸರ್ಕಾರ ಸಾರಿ ಸಾರಿ ಹೇಳಿದೆ. ಆದ್ರೂ ಅನೇಕರು 10 ರೂಪಾಯಿ ನಾಣ್ಯ ಸ್ವೀಕರಿಸೋದಕ್ಕೆ ಹಿಂದೆ ಮುಂದೆ ನೋಡ್ತಾರೆ. ಈ ಮಧ್ಯೆ ಕೇಂದ್ರ ಸರ್ಕಾರ ಮಹತ್ವದ ನಿರ್ಣಯವೊಂದನ್ನು ತೆಗೆದುಕೊಂಡಿದೆ.

ಸದ್ಯ 10 ರೂಪಾಯಿ ನಾಣ್ಯ ತಯಾರಿಕೆಯನ್ನು ನಿಲ್ಲಿಸಿದೆ. ಮಾರುಕಟ್ಟೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ 10 ರೂಪಾಯಿ ನಾಣ್ಯವಿದೆ. ಹಾಗಾಗಿ 10 ರೂಪಾಯಿ ನಾಣ್ಯ ತಯಾರಿಕೆ ಸ್ಥಗಿತವಾಗಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ರೂಪದಲ್ಲಿ ಉತ್ತರ ನೀಡಿದ ಜೇಟ್ಲಿ ಮಾರುಕಟ್ಟೆಯಲ್ಲಿ 10 ರೂಪಾಯಿ ನಾಣ್ಯದ ಬೇಡಿಕೆಗೆ ಯಾವುದೇ ತೊಂದರೆಯಾಗಿಲ್ಲ. ದೇಶದಲ್ಲಿ ಎಲ್ಲ ರೀತಿಯ ನಾಣ್ಯಗಳ ಸ್ಟಾಕ್ ಇದೆ. ಯಾರೂ ಈ ಬಗ್ಗೆ ಚಿಂತಿಸಬೇಕಾದ ಅಗತ್ಯವಿಲ್ಲವೆಂದು ಜೇಟ್ಲಿ ಹೇಳಿದ್ದಾರೆ.

ಆರ್ ಬಿ ಐ ಅಥವಾ ಬ್ಯಾಂಕ್ ಶಾಖೆಗಳಿಗೆ ಹೋಗಿ ಜನರು 10 ರೂಪಾಯಿ ನಾಣ್ಯವನ್ನು ಪಡೆಯಬಹುದು. ಯಾವುದೇ ನಾಣ್ಯವನ್ನು ನಿಷೇದಿಸಲಾಗಿಲ್ಲ. ಮಾರುಕಟ್ಟೆಯಲ್ಲಿರುವ ಎಲ್ಲ 10 ರೂಪಾಯಿ ನಾಣ್ಯಗಳು ಮಾನ್ಯವಾಗಿವೆ ಎಂದು ಜೇಟ್ಲಿ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ 14 ವಿವಿಧ ವಿನ್ಯಾಸದ ನಾಣ್ಯಗಳಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...