alex Certify
ಕನ್ನಡ ದುನಿಯಾ       Mobile App
       

Kannada Duniya

ಅಬ್ಬಬ್ಬಾ! GST ಯಿಂದ ಬಂದಿದೆ ಭಾರೀ ಆದಾಯ

gst-dd

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.) ಜುಲೈ 1 ರಿಂದಲೇ ಜಾರಿಯಾಗಿದ್ದು, 1 ತಿಂಗಳ ಅವಧಿಯಲ್ಲಿ ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ 42,000 ಕೋಟಿ ರೂ. ಆದಾಯ ಬಂದಿದೆ.

ಜಿ.ಎಸ್.ಟಿ. ಅನ್ವಯ ವರ್ತಕರು, ಉದ್ಯಮಿಗಳು ಪ್ರತಿ ತಿಂಗಳು ತಮ್ಮ ತೆರಿಗೆ ವಿವರಗಳನ್ನು ಸಲ್ಲಿಸಬೇಕಿದ್ದು, ಜುಲೈ ತಿಂಗಳ ವಿವರವನ್ನು ಸಲ್ಲಿಸಲು ಆಗಸ್ಟ್ 25 ರ ವರೆಗೆ ಅವಕಾಶ ನೀಡಲಾಗಿದೆ.

ಸುಮಾರು 10 ಲಕ್ಷ ಮಂದಿ ತೆರಿಗೆ ವಿವರ ಸಲ್ಲಿಸಿದ್ದು, 20 ಲಕ್ಷಕ್ಕೂ ಅಧಿಕ ಮಂದಿ ಜಿ.ಎಸ್.ಟಿ. ವೆಬ್ ಸೈಟ್ ಗೆ ಲಾಗಿನ್ ಆಗಿ ತಮ್ಮ ತೆರಿಗೆ ವಿವರ ಸೇವ್ ಮಾಡಿದ್ದಾರೆ.

ಅಂತರರಾಜ್ಯ ಸರಕುಗಳ ಮೇಲೆ ವಿಧಿಸಿರುವ ಜಿ.ಎಸ್.ಟಿ.ಯಿಂದಾಗಿ 15,000 ಕೋಟಿ ರೂ. ಆದಾಯ ಬಂದಿದೆ. ತಂಬಾಕು ಉತ್ಪನ್ನ, ಕಾರ್ ಮೊದಲಾದವುಗಳ ಮೇಲಿನ ಸೆಸ್ ನಿಂದಾಗಿ ಸುಮಾರು 5000 ಕೋಟಿ ರೂ. ಆದಾಯ ಬಂದಿದೆ.

ಕೇಂದ್ರ ಮತ್ತು ರಾಜ್ಯ ಜಿ.ಎಸ್.ಟಿ.ಯಿಂದ 22,000 ಕೋಟಿ ರೂ. ಆದಾಯ ಬಂದಿದ್ದು, ಇದು ಕೇಂದ್ರ ಮತ್ತು ರಾಜ್ಯಗಳಿಗೆ ಸಮನಾಗಿ ಹಂಚಿಕೆಯಾಗುತ್ತದೆ. ಜಿ.ಎಸ್.ಟಿ.ಯಿಂದ ಆಗಸ್ಟ್ 21 ರ ಬೆಳಿಗ್ಗೆಯವರೆಗೆ 42,000 ಕೋಟಿ ರೂ. ಆದಾಯ ಬೊಕ್ಕಸಕ್ಕೆ ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...