alex Certify
ಕನ್ನಡ ದುನಿಯಾ       Mobile App
       

Kannada Duniya

ಗುಡ್ ನ್ಯೂಸ್: ಜಿಎಸ್‌ಟಿಆರ್‌-3ಬಿ ಸಲ್ಲಿಕೆಗೆ ಅವಧಿ ವಿಸ್ತರಣೆ

ಕೇರಳ ಹಾಗೂ ಕೊಡಗಿನಲ್ಲಿನ ಪ್ರವಾಹದ ಹಿನ್ನೆಲೆಯಲ್ಲಿ ಜುಲೈನ ಜಿಎಸ್‌ಟಿಆರ್‌-3ಬಿ ಸಲ್ಲಿಕೆಗೆ ಇದ್ದ ಅಂತಿಮ ದಿನಾಂಕವನ್ನು ವಿಸ್ತರಿಸಲಾಗಿದೆ. ಅಲ್ಲದೆ ಪ್ರವಾಹ ಪೀಡಿತರಿಗೆ ನೀಡಲಾಗುವ ಸರಕುಗಳಿಗೆ ವಾಣಿಜ್ಯ(ಕಸ್ಟಮ್ಸ್‌) ಸುಂಕ ಹಾಗೂ ಜಿಎಸ್‌ಟಿನಿಂದ ವಿನಾಯಿತಿ ನೀಡಲಾಗಿದೆ.

ಜುಲೈ ತಿಂಗಳ ಜಿಎಸ್‌ಟಿಆರ್‌-3ಬಿ ಸಲ್ಲಿಕೆಗೆ ಆ.20 ಕೊನೆ ದಿನವಾಗಿತ್ತು. ಕೊಡಗು ಹಾಗೂ ಕೇರಳದ ಅನೇಕ ಭಾಗಗಳಲ್ಲಿ ಉಂಟಾಗಿರುವ ಪ್ರವಾಹದಿಂದ ಅಂತಿಮ ದಿನಾಂಕವನ್ನು ಅ.5ರ ವರೆಗೆ ವಿಸ್ತರಿಸಲಾಗಿದೆ. ಅಂತೆಯೇ ಆಗಸ್ಟ್‌ನ ಜಿಎಸ್‌ಟಿಆರ್‌-3ಬಿ ಸಲ್ಲಿಕೆ ಅ.10ರ ವರೆಗೆ ಅವಕಾಶ ನೀಡಲಾಗಿದೆ.

ಇದಲ್ಲದೆ ದೇಶಾದ್ಯಂತ ಜಿಎಸ್‌ಟಿಆರ್‌ -3ಬಿ ಸಲ್ಲಿಕೆಗೆ ಇದ್ದ ಅಂತಿಮ ದಿನಾಂಕವನ್ನು ಆ.24ರ ವರೆಗೆ ವಿಸ್ತರಿಸಲಾಗಿದೆ. ವಾರ್ಷಿಕ 1.5 ಕೋಟಿ ರೂ. ವಹಿವಾಟು ನಡೆಸುವವರು ಜುಲೈ ಹಾಗೂ ಸೆಪ್ಟೆಂಬರ್ ಜಿಎಸ್‌ಟಿಆರ್‌-1 ಸಲ್ಲಿಕೆಗೆ ನ.15ರ ವರೆಗೆ ಅವಕಾಶ ಇದೆ ಎಂದು ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...