alex Certify
ಕನ್ನಡ ದುನಿಯಾ       Mobile App
       

Kannada Duniya

500 ರೂ. ಗಿಂತ ಕಡಿಮೆ ಬೆಲೆಗೆ ಸಿಗ್ತಿದೆ ಈ ಫೋನ್…!

ಇತ್ತೀಚಿನ ದಿನಗಳಲ್ಲಿ ಫೀಚರ್ ಫೋನ್ ಗೆ ಬೇಡಿಕೆ ಹೆಚ್ಚಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಗೂಗಲ್ 4ಜಿ ಫೀಚರ್ ಫೋನ್ ಬಿಡುಗಡೆ ಮಾಡಿದೆ. ಇದಕ್ಕೆ ಗೂಗಲ್ wizphone-wp006 ಎಂದು ಹೆಸರಿಟ್ಟಿದೆ. ಈ ಫೋನ್ ಕಿಯೋಸ್ಕ್ ನಲ್ಲಿ ಕೆಲಸ ಮಾಡಲಿದೆ.

ಗೂಗಲ್ wizphone-wp006 ಸ್ಮಾರ್ಟ್ಫೋನನ್ನು ಡಿಸೆಂಬರ್ 4ರಂದು ಇಂಡೋನೇಷ್ಯಾದಲ್ಲಿ ಬಿಡುಗಡೆ ಮಾಡಿದೆ. ಗೂಗಲ್ ನ ಈ ಫೋನ್ ಬೆಲೆ 99,000 ಇಂಡೋನೇಷ್ಯಾ ರೂಪಾಯಿ ( ಸುಮಾರು 482 ರೂಪಾಯಿ). ಈ ಫೀಚರ್ ಫೋನ್ ಸಾಕಷ್ಟು ವೈಶಿಷ್ಟತೆಯನ್ನು ಹೊಂದಿದೆ. ಧ್ವನಿ ಆಜ್ಞೆ ಬಳಸಿ ಕರೆ ಮಾಡಬಹುದಾಗಿದೆ.

ಮ್ಯೂಜಿಕ್ ವ್ಯವಸ್ಥೆ ಇದ್ರಲ್ಲಿದ್ದು, ವಿಡಿಯೋ ಕೂಡ ನೋಡಬಹುದಾಗಿದೆ. ಮೆಸ್ಸೇಜ್ ಕಳಿಸುವ ವ್ಯವಸ್ಥೆಯೂ ಇದ್ರಲ್ಲಿದೆ. ವಾಟ್ಸಾಪ್, ಫೇಸ್ಬುಕ್ ಹಾಗೂ ಯುಟ್ಯೂಬ್ ಈಗ ಕಿಯೋಸ್ ಫ್ಲಾಟ್ಫಾರ್ಮ್ ನಲ್ಲಿ ಲಭ್ಯವಿದೆ. ಜಿಯೋ ಫೀಚರ್ ಫೋನ್ ನಲ್ಲಿ ಈಗಾಗ್ಲೇ ಇದೆಲ್ಲ ಸಿಗ್ತಾಯಿದ್ದು, ಗೂಗಲ್ ಫೋನ್ ನಲ್ಲಿ ಕೂಡ ಇದು ಸಿಗಲಿದೆ.

ಈ ಫೀಚರ್ ಫೋನ್ 1800 mAh ಬ್ಯಾಟರಿ ಹೊಂದಿದೆ. 350 ಗಂಟೆ ಬ್ಯಾಕ್ ಅಪ್ ನೀಡುತ್ತೆ ಎಂದು ಕಂಪನಿ ಹೇಳಿದೆ. 512 ಎಂಬಿ ರ್ಯಾಮ್ ಹಾಗೂ 4ಜಿಬಿ ಇಂಟರ್ನಲ್ ಸ್ಟೋರೇಜ್ ನೀಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...