alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಲ್ ಮತ್ತು ಕೆಫೆಗಳಲ್ಲೂ ಸಿಗಲಿದೆ ಉಚಿತ ವೈಫೈ

A man holds his smartphone which displays the Google home page, in this picture illustration taken in Bordeaux, Southwestern France, August 22, 2016. REUTERS/Regis Duvignauಮಾಹಿತಿ ತಂತ್ರಜ್ಞಾನದ ದೈತ್ಯ ಸಂಸ್ಥೆ ಗೂಗಲ್, ಭಾರತದ 100 ರೈಲು ನಿಲ್ದಾಣಗಳಲ್ಲಿ ಉಚಿತ ವೈಫೈ ನೀಡುವ ಕಾರ್ಯ ಆರಂಭಿಸಿದ್ದು, ಈಗಾಗಲೇ 52 ರೈಲ್ವೇ ನಿಲ್ದಾಣಗಳಲ್ಲಿ ಬಳಕೆದಾರರಿಗೆ ಇದು ಲಭ್ಯವಾಗುತ್ತಿದೆ. ಈ ಮಧ್ಯೆ ಗೂಗಲ್ ಮತ್ತೊಂದು ಘೋಷಣೆ ಮಾಡುವ ಮೂಲಕ ಇಂಟರ್ನೆಟ್ ಬಳಕೆದಾರರಿಗೆ ಸಂತಸ ಮೂಡಿಸಿದೆ.

ಗುರುಗ್ರಾಮದಲ್ಲಿ ಇಂದು ನಡೆದ ಸಮಾರಂಭದಲ್ಲಿ ಈ ಮಾಹಿತಿ ನೀಡಲಾಗಿದ್ದು, ಮಾಲ್ ಗಳು, ಕೆಫೆ, ಮೆಟ್ರೋ ರೈಲು ನಿಲ್ದಾಣ, ವಿಶ್ವವಿದ್ಯಾನಿಲಯ ಸೇರಿದಂತೆ ಹಲವು ಸಾರ್ವಜನಿಕ ಸ್ಥಳಗಳಲ್ಲಿ ಗೂಗಲ್ ಉಚಿತ ವೈಫೈ ಸೌಲಭ್ಯ ನೀಡಲಿದೆ ಎಂದು ಘೋಷಿಸಲಾಗಿದೆ.

ಜೊತೆಗೆ ಫೇಸ್ ಬುಕ್ ನ ವಾಟ್ಸಾಪ್ ಗೆ ಸ್ಪರ್ಧೆಯೊಡ್ಡಲು ಗೂಗಲ್ ಬಿಡುಗಡೆ ಮಾಡಿರುವ Allo ಭಾರತದಲ್ಲಿ ಈಗಾಗಲೇ ಲಭ್ಯವಾಗುತ್ತಿದೆ. ಅಲ್ಲದೇ ಸ್ಮಾರ್ಟ್ ಫೋನ್ ನಲ್ಲಿ ಗೂಗಲ್ ಕ್ರೋಮ್ ಬಳಸಿ ವಿಡಿಯೋ ವೀಕ್ಷಿಸಿದರೆ ಶೇ.67 ರಷ್ಟು ಡೇಟಾವನ್ನು ಉಳಿತಾಯ ಮಾಡಬಹುದೆಂದು ಗೂಗಲ್ ಹೇಳಿದೆ. ಗೂಗಲ್ ಸೆಪ್ಟೆಂಬರ್ 27 ರ ಇಂದು ತನ್ನ 18 ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...