alex Certify
ಕನ್ನಡ ದುನಿಯಾ       Mobile App
       

Kannada Duniya

‘ಗೂಗಲ್‌ ಪೇ’ ಮೂಲಕವೂ ಸಿಗಲಿದೆ ಸಾಲ ಸೌಲಭ್ಯ

ಇನ್ನು ಕೆಲ ದಿನಗಳಲ್ಲಿ ಗೂಗಲ್‌ ಪೇ ಅಪ್ಲಿಕೇಶನ್‌ ಮೂಲಕ ಸಾಲ ಪಡೆಯುವ ಸೌಲಭ್ಯ ಸಿಗಲಿದೆ. ಗೂಗಲ್‌ ತೇಜ್‌ ಎಂಬ ಹೆಸರಿನಲ್ಲಿ ಆರಂಭವಾದ ಅಪ್ಲಿಕೇಶನ್‌ನ್ನು ಬಳಿಕ ಗೂಗಲ್‌ ಪೇ ಎಂದು ಹೊಸದಾಗಿ ಬಿಡುಗಡೆ ಮಾಡಲಾಗಿತ್ತು.

ಮಾರುಕಟ್ಟೆ ವಿಸ್ತರಣೆಯ ಭಾಗವಾಗಿ ಹೊಸ ಅಪ್‌ಡೇಟ್ ಗೂಗಲ್‌ ಪೇನಲ್ಲಿ ಬರಲಿದ್ದು, ಖಾಸಗಿ ಬ್ಯಾಂಕ್‌ಗಳೊಂದಿಗೆ ಸಹಯೋಗ ಮಾಡಿಕೊಳ್ಳಲಾಗಿದೆ. ಪೇ ಅಪ್ಲಿಕೇಶನ್‌ ಮೂಲಕ ಎಚ್‌ಡಿಎಫ್‌ಸಿ, ಐಸಿಐಸಿಐ, ಫೆಡರಲ್‌, ಕೋಟಕ್‌ ಮಹೀಂದ್ರ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ಪಡೆಯಬಹುದಾಗಿದೆ.

ಡಿಜಿಟಲ್‌ ಅಪ್ಲಿಕೇಶನ್‌ ಮೂಲಕ ಬ್ಯಾಂಕ್‌ಗಳಿಗೆ ಗ್ರಾಹಕರ ಅವಶ್ಯಕತೆಯನ್ನು ಸಲ್ಲಿಸಬೇಕು. ಈ ಬಳಿಕ ಕನಿಷ್ಠ ಪೇಪರ್‌ ವರ್ಕ್‌ಗಳ ಮೂಲಕ ಬ್ಯಾಂಕ್‌ ಖಾತೆಗೆ ಸಾಲ ಜಮಾಗೊಳ್ಳಲಿದೆ. ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಹೊಸ ಅಪ್‌ಡೇಟ್‌ ಮುಂದಿನ ವಾರದಲ್ಲಿ ಬಿಡುಗಡೆಗೊಳ್ಳಲಿದೆ. ಗೂಗಲ್‌ ಪ್ರಧಾನ ವ್ಯವಸ್ಥಾಪಕ(ಪೇಮೆಂಟ್ಸ್‌ ವಿಭಾಗ) ಸೇನ್‌ಗುಪ್ತಾ ಅವರು ಈ ವಿವರಗಳನ್ನು ಹಂಚಿಕೊಂಡಿದ್ದಾರೆ.

ಗೂಗಲ್‌ ಪೇನಲ್ಲಿ 2.2 ಕೋಟಿ ಜನರು ಬಳಕೆದಾರರಿದ್ದು, 75 ಕೋಟಿ ರೂ. ವಹಿವಾಟು ನಡೆಸಿದ್ದಾರೆ. ವಾರ್ಷಿಕ ಸರಾಸರಿ ವಹಿವಾಟು 2 ಲಕ್ಷ ಕೋಟಿ ರೂ. ನಡೆಯುತ್ತಿದೆ. ಅಷ್ಟು ಮಾತ್ರವಲ್ಲದೆ ರೆಡ್‌ಬಸ್‌, ಬುಕ್‌ಮೈ ಶೋ, ಎಂಐ, ಗೊಐಬಿಬೋ, ಬಿಗ್‌ಬಜಾರ್‌, ಎಫ್‌ಬಿಬಿ, ಇ-ಜೋನ್‌ ಸೇರಿದಂತೆ ಇನ್ನಿತರ ಇ-ಕಾಮರ್ಸ್‌ನ 15 ಸಾವಿರ ರಿಟೇಲ್‌ ಸ್ಟೋರ್‌ಗಳೂ ಗೂಗಲ್‌ ಪೇ ನಲ್ಲಿ ಸೇರಿಕೊಳ್ಳಲಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...