alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ಮೇಲೆ ಗೂಗಲ್ ಸರ್ಚ್ ರಿಸಲ್ಟ್ ನಲ್ಲಿ ಇರೋದಿಲ್ಲ ಈ ಆಪ್ಷನ್

ಇಂಟರ್ನೆಟ್ ನಲ್ಲಿ ಇನ್ಮೇಲೆ ಫ್ರೀಯಾಗಿ ಗೂಗಲ್ ಇಮೇಜ್ ಗಳು ಸಿಗುವುದಿಲ್ಲ. ಸರ್ಚ್ ರಿಸಲ್ಟ್ ನಿಂದ ವ್ಯೂ ಇಮೇಜ್ ಎಂಬ ಆಪ್ಷನ್ ಅನ್ನೇ ಗೂಗಲ್ ತೆಗೆದು ಹಾಕಿದೆ. ಸರ್ಚ್ ಇಮೇಜ್ ಬಟನ್ ಅನ್ನು ಕೂಡ ರಿಮೂವ್ ಮಾಡಿದೆ.

ಕೃತಿ ಸ್ವಾಮ್ಯ ಉಲ್ಲಂಘನೆ ಮತ್ತು ಸರ್ಚ್ ಎಂಜಿನ್ ನಿಂದ ಇಮೇಜ್ ಗಳ ಕಳ್ಳತನ ತಡೆಯಲು ಗೂಗಲ್ ಈ ಕ್ರಮ ಕೈಗೊಂಡಿದೆ. ಇಮೇಜ್ ಸರ್ಚ್ ಮೂಲಕ ನೇರವಾಗಿ ವೆಬ್ ಸೈಟ್ ಗೆ ವಿಸಿಟ್ ಮಾಡಲು ಅವಕಾಶವಿತ್ತು. ಆದ್ರೆ ಇದಕ್ಕೆ ಆಕ್ಷೇಪ ವ್ಯಕ್ತವಾಗಿದ್ದರಿಂದ ಆಪ್ಷನ್ ಅನ್ನೇ ಗೂಗಲ್ ತೆಗೆದುಹಾಕಿದೆ.

ಜಗತ್ತಿನ ಅತಿ ದೊಡ್ಡ ಸ್ಟಾಕ್ ಫೋಟೋ ಏಜೆನ್ಸಿ ಗೆಟ್ಟಿ ಇಮೇಜಸ್ ಜೊತೆಗಿನ ಲೀಗಲ್ ಸೆಟಲ್ಮೆಂಟ್ ಗಾಗಿ ಗೂಗಲ್ ವ್ಯೂ ಇಮೇಜ್ ಬಟನ್ ಅನ್ನು ರಿಮೂವ್ ಮಾಡಿದೆ. ಗೆಟ್ಟಿ ಜೊತೆಗೆ ಗೂಗಲ್ ಪಾಲುದಾರಿಕೆಯನ್ನು ಮಾಡಿಕೊಂಡಿದೆ. ಹಾಗಾಗಿ ಸರ್ಚ್ ಪೇಜ್ ಗಳಲ್ಲಿ ಗೆಟ್ಟಿ ಕಂಟೆಂಟ್ ಗಳು ಲಭ್ಯವಾಗುತ್ತವೆ.

ಹಾಗಂತ ನಿಮಗೆ ಇನ್ಮೇಲೆ ಇಮೇಜ್ ಗಳು ಸಿಗೋದಿಲ್ಲ ಎಂದರ್ಥವಲ್ಲ. ಹೈ ಕ್ವಾಲಿಟಿ, ಲಾರ್ಜ್ ಸೈಜ್ ಇಮೇಜ್ ಗಳು ಲಭ್ಯವಾಗುತ್ತವೆ. ಆದ್ರೆ ಒಂದು ಬಟನ್ ಕ್ಲಿಕ್ ನಿಂದ ಕೆಲಸ ಆಗುವುದಿಲ್ಲ. ಈ ಪ್ರಕ್ರಿಯೆಗೆ ಅಧಿಕ ಬಾರಿ ಕ್ಲಿಕ್ ಮಾಡಬೇಕಾಗುತ್ತದೆ. ಡ್ರ್ಯಾಗ್ & ಡ್ರಾಪ್ ಆಪ್ಷನ್ ಕೂಡ ಇದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...