alex Certify
ಕನ್ನಡ ದುನಿಯಾ       Mobile App
       

Kannada Duniya

ಗೂಗಲ್ ನ ಹೊಸ ವಿಡಿಯೋ ಚಾಟಿಂಗ್ ಆಪ್ ಬಿಡುಗಡೆ

Google launches video calling app Duo for Android and iOSಗೂಗಲ್ ತನ್ನ ಹೊಸ ವಿಡಿಯೋ ಚಾಟಿಂಗ್ ಆಪ್ ‘ಡುಯೋ’ ಬಿಡುಗಡೆ ಮಾಡಿದೆ. ಇದು ಆಪಲ್ ನ ಫೇಸ್ ಟೈಮ್, ಮೈಕ್ರೋಸಾಫ್ಟ್ ನ ಸ್ಕೈಪ್ ಮತ್ತು ಫೇಸ್ ಬುಕ್ ನ ಮೆಸೆಂಜರ್ ಗಳಿಗೆ ತೀವ್ರ ಸ್ಪರ್ಧೆ ಕೊಡಲಿದೆ ಎಂದು ಹೇಳಲಾಗಿದೆ. ಈ ಹೊಸ ಆಪ್ ಸಹಾಯದಿಂದ ಗೆಳೆಯರೊಂದಿಗೆ ಮತ್ತು ಪರಿವಾರದವರೊಂದಿಗೆ ಮಾತನಾಡುವಾಗ ಒಬ್ಬರನ್ನೊಬ್ಬರು ನೋಡಬಹುದಾಗಿದೆ.

ಈ ಹೊಸ ಆಪ್ ಉಳಿದ ಆಪ್ ಗಳಿಗಿಂತ ಹೆಚ್ಚಿಗೆ ಭಿನ್ನವಾಗಿರದಿದ್ದರೂ ಇದರಲ್ಲಿ ಕರೆ ಮಾಡಿದವರ ಮುಖದ ಭಾವನೆಯನ್ನು ನಾವು ನೋಡಬಹುದಾಗಿದೆ. ಈ ಫೀಚರ್ ಗೆ ಗೂಗಲ್ ‘ನಾಕ್ ನಾಕ್’ ಎಂದು ಹೆಸರಿಟ್ಟಿದೆ. ಈ ಆಪ್ ಗೂಗಲ್ ಅಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಫೋನ್ ನಲ್ಲಿ ಮತ್ತು ಆ್ಯಪಲ್ ನ ಐಫೋನ್ ಗಳಲ್ಲಿ ಲಭ್ಯವಿದೆ.

ಫೇಸ್ ಟೈಮ್ ತರಹ ಇದರಲ್ಲಿ ಒಬ್ಬ ವ್ಯಕ್ತಿಯ ಜೊತೆ ಸಂಪರ್ಕಿಸಲು ಆ ವ್ಯಕ್ತಿಯ ನಂಬರ್ ಅಗತ್ಯವಿಲ್ಲ. ಗೂಗಲ್ 2013 ರಿಂದ ಹ್ಯಾಂಗ್ ಔಟ್ ಮೂಲಕ ವಿಡಿಯೋ ಕಾಲಿಂಗ್ ಸೌಲಭ್ಯ ಕೊಡುತ್ತಿತ್ತು. ಕಂಪನಿ ಈಗ ಬಿಸಿನೆಸ್ ಮೀಟಿಂಗ್ ಗಳಿಗೆ ಉಪಯೋಗವಾಗುವಂತೆ ವಿಸ್ತರಿಸುತ್ತಿದೆ. ಇದರೊಂದಿಗೆ ಗೂಗಲ್ ಇನ್ನೂ ಒಂದು ಮೆಸೇಜಿಂಗ್ ಆಪ್ ಅನ್ನು ಹೊರತರಲಿದೆ. ಎಲೋಫೀಚರಿಂಗ್ ಹೆಸರಿನ ಈ ಆಪ್, ಸಂದೇಶಗಳಿಗೆ ಯಾವ ರೀತಿ ಉತ್ತರಿಸಬೇಕೆಂಬುದರ ಕುರಿತು ಸಲಹೆ ನೀಡುತ್ತದೆಯಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...