alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟ್ಸಾಪ್ ಗೆ ಸೆಡ್ಡು ಹೊಡೆಯಲು ಬಂದಿದೆ Allo

Google launches Allo messaging app to take on WhatsAppಫೇಸ್ ಬುಕ್ ನ ವಾಟ್ಸಾಪ್ ಗೆ ಸೆಡ್ಡು ಹೊಡೆಯಲು ಮುಂದಾಗಿರುವ ಗೂಗಲ್, ಈಗ ಇದಕ್ಕಾಗಿ Allo ಮೆಸೇಜಿಂಗ್ ಅಪ್ಲಿಕೇಶನ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿರುವ ಈ ಆಪ್ ಅನ್ನು ಈಗಾಗಲೇ 10 ಮಿಲಿಯನ್ ಮಂದಿ ಡೌನ್ ಲೋಡ್ ಮಾಡಿಕೊಂಡಿದ್ದಾರೆಂದು ಹೇಳಲಾಗಿದೆ.

ವಾಟ್ಸಾಪ್ ನಂತೆಯೇ Allo ಬಳಸಲು ಮೊಬೈಲ್ ನಂಬರ್ ಇರಬೇಕಾಗಿದ್ದು, ಗೂಗಲ್ ಅಕೌಂಟ್ ಮೂಲಕವೂ ಇದನ್ನು ಬಳಕೆ ಮಾಡಿಕೊಳ್ಳಬಹುದೆಂದು ಹೇಳಲಾಗಿದೆ. Allo ಬಳಸುತ್ತಲೇ ಗೂಗಲ್ ಸರ್ಚ್ ಮಾಡುವ ಅವಕಾಶವನ್ನೂ ಇದರಲ್ಲಿ ನೀಡಲಾಗಿದೆ.

ಆದರೆ ವಾಟ್ಸಾಪ್ ನಲ್ಲಿರುವಂತೆ ವಾಯ್ಸ್ ಕಾಲಿಂಗ್ ಹಾಗೂ ಡಾಕ್ಯುಮೆಂಟ್ ಶೇರಿಂಗ್ ಸೌಲಭ್ಯ Allo ದಲ್ಲಿ ಇಲ್ಲದಿರುವುದು ಮೈನಸ್ ಪಾಯಿಂಟ್ ಆಗಿದೆ. ಆದರೆ ಮುಂದಿನ ದಿನಗಳಲ್ಲಿ ಈ ಸೌಲಭ್ಯದ ಜೊತೆಗೆ ವಿಡಿಯೋ ಕಾಲಿಂಗ್ ಗೂ ಅವಕಾಶ ಲಭ್ಯವಾಗುವುದೆಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...