alex Certify
ಕನ್ನಡ ದುನಿಯಾ       Mobile App
       

Kannada Duniya

ಬಂದ್ ಆಗ್ತಿದೆ ‘ಗೂಗಲ್’ ನ ಈ ಆಪ್

ವಿಶ್ವದ ದೊಡ್ಡ ಟೆಕ್ ಕಂಪನಿ ಗೂಗಲ್ ತನ್ನ ಮೆಸೆಂಜರ್ ಆಪ್ Allo ವನ್ನು ಬಂದ್ ಮಾಡ್ತಿದೆ. ಸೆಪ್ಟೆಂಬರ್ 2016 ರಲ್ಲಿ ಗೂಗಲ್ Allo ಆಪ್ ಶುರು ಮಾಡಿತ್ತು. ಆದ್ರೆ ಗೂಗಲ್ ನಿರೀಕ್ಷೆ ಮಾಡಿದಷ್ಟು ಜನಪ್ರಿಯತೆ Allo ಗೆ ಸಿಗಲಿಲ್ಲ. ಹಾಗಾಗಿ ಅಪ್ಲಿಕೇಷನ್ ಮುಚ್ಚಲು ಗೂಗಲ್ ನಿರ್ಧರಿಸಿದೆ.

ಗೂಗಲ್ ಬ್ಲಾಗ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ. Allo ಆಪ್ 2019 ರವರೆಗೆ ಇರಲಿದೆ. ನಂತ್ರ ಬಂದ್ ಆಗಲಿದೆ. ಅಪ್ಲಿಕೇಷನ್ ನಲ್ಲಿರುವ ಹಳೆಯ ಸಂಭಾಷಣೆ ಹಾಗೂ ಚಾಟ್ ವಿವರವನ್ನು ನೀವು ಎಕ್ಸ್ಪೋರ್ಟ್ ಮಾಡಬಹುದು ಎಂದು ಕಂಪನಿ ಹೇಳಿದೆ. Allo ಅಪ್ಲಿಕೇಷನ್ ನಿಂದ ಸಾಕಷ್ಟು ಕಲಿತಿದ್ದೇವೆ ಎಂದು ಗೂಗಲ್ ಹೇಳಿದೆ.

ಈ ವರ್ಷ ಏಪ್ರಿಲ್ ನಿಂದ ಗೂಗಲ್ Allo ಆಪ್ ಗೆ ಹೂಡಿಕೆ ಮಾಡುವುದನ್ನು ನಿಲ್ಲಿಸಿತ್ತು. Allo ಆಪ್ ಕಾರ್ಯಪಡೆಯನ್ನು ಬೇರೆ ಕೆಲಸಕ್ಕೆ ನಿಯೋಜನೆ ಮಾಡಿತ್ತು. ಕಂಪನಿ Allo ಪ್ರಚಾರಕ್ಕೆ ಸಾಕಷ್ಟು ಪ್ರಯತ್ನ ನಡೆಸಿತ್ತು. ಕೆಲವೊಂದು ವೈಶಿಷ್ಟ್ಯಗಳನ್ನು ಮಧ್ಯೆ ಸೇರಿಸಿತ್ತು. ಆದ್ರೆ ವಾಟ್ಸಾಪ್ ಹಾಗೂ ಮೆಸೆಂಜರ್ ಗೆ ಟಕ್ಕರ್ ನೀಡಲು ಸಾಧ್ಯವಾಗಲಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...