alex Certify
ಕನ್ನಡ ದುನಿಯಾ       Mobile App
       

Kannada Duniya

ಗೂಗಲ್ ಪ್ಲೇ ಸ್ಟೋರ್ ನಲ್ಲಿ ಸಿಗ್ತಿಲ್ಲ UC ಬ್ರೌಸರ್

ಚೀನಾದ ಇ-ಕಾಮರ್ಸ್ ದೈತ್ಯ ಅಲಿ ಬಾಬಾ ಒಡೆತನದ UC ಬ್ರೌಸರನ್ನು ಗೂಗಲ್, ಪ್ಲೇ ಸ್ಟೋರ್ ನಿಂದ ತೆಗೆದು ಹಾಕಿದೆ. ಭಾರತದಲ್ಲಿ ಅತಿ ಹೆಚ್ಚು ಡೌನ್ಲೋಡ್ ಆಗುವ ಆ್ಯಪ್ ಗಳ ಪಟ್ಟಿಯಲ್ಲಿ UC ಬ್ರೌಸರ್ ಆರನೇ ಸ್ಥಾನದಲ್ಲಿದೆ. ಪ್ಲೇ ಸ್ಟೋರ್ ನಲ್ಲಿ ಸರ್ಚ್ ಮಾಡಿದ್ರೂ UC ಬ್ರೌಸರ್ ಸಿಗ್ತಿಲ್ಲ.

ಭಾರತದಲ್ಲಿ UC ಬ್ರೌಸರ್ ಹೆಚ್ಚು ಪ್ರಸಿದ್ಧಿ ಪಡೆದಿದೆ. ವಿಶ್ವದಾದ್ಯಂತ ಇದಕ್ಕೆ 420 ಮಿಲಿಯನ್ ಬಳಕೆದಾರರಿದ್ದಾರೆ. 100 ಮಿಲಿಯನ್ ಬಳಕೆದಾರರು ಕೇವಲ ಭಾರತದಲ್ಲಿದ್ದಾರೆ. ಅಂದ್ರೆ 1 ಕೋಟಿ ಭಾರತೀಯರು ಬಳಕೆ ಮಾಡುತ್ತಿರುವ UC ಬ್ರೌಸರ್ ಆ್ಯಪನ್ನು ಗೂಗಲ್ ಪ್ಲೇ ಸ್ಟೋರ್ ಡಿಲಿಟ್ ಮಾಡಿದೆ. ಇದಕ್ಕೆ ಕಾರಣ ಏನೆಂಬುದು ಗೊತ್ತಾಗಿಲ್ಲ.

ಈ ಹಿಂದೆ UC ಬ್ರೌಸರ್ ನಲ್ಲಿ ಡೇಟಾ ಸಂಗ್ರಹ ಮಾಡಲಾಗ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಸದ್ಯ ಗೂಗಲ್ ಪ್ಲೇ ಸ್ಟೋರ್ ನಲ್ಲಿ UC Browser Mini ಮತ್ತು New UC Browser ಆ್ಯಪ್ ಇದೆ. ಆದ್ರೆ UC Browser ಆ್ಯಪ್ ಸಿಗ್ತಿಲ್ಲ. ಇದಕ್ಕೆ ಕಾರಣವೇನು ಎಂಬುದನ್ನು ಸದ್ಯವೇ ಗೂಗಲ್ ಹೇಳುವ ಸಾಧ್ಯತೆಯಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...