alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಮೊಬೈಲ್ ನಿಮ್ಮಲ್ಲಿದೆಯೇ? ಹಾಗಿದ್ರೆ ಈ ಸುದ್ದಿ ಓದಿ

ನಿಮ್ಮ ಬಳಿ ವನ್ ಪ್ಲಸ್ 3 ಅಥವಾ ವನ್ ಪ್ಲಸ್ 3ಟಿ ಮೊಬೈಲ್ ಇದ್ಯಾ? ಹಾಗಿದ್ರೆ ಈ ಸ್ಟೋರಿಯನ್ನು ನೀವು ಓದಲೇಬೇಕು. ಯಾಕಂದ್ರೆ ಈ ಮೊಬೈಲ್ ಗೆ ಮಾರಕವಾದ ಆ್ಯಪ್ ಒಂದನ್ನು ಗೂಗಲ್ ಪ್ಲೇ ಪತ್ತೆ ಮಾಡಿದೆ. ಫ್ಯಾಕ್ಟರಿ ಮೋಡ್ ಅನ್ನೋ ಈ ಆ್ಯಪ್ ವನ್ ಪ್ಲಸ್ ಮೊಬೈಲ್ ಗಳಿಗೆ ಸೂಕ್ತವಲ್ಲ ಅಂತಾ ಗೂಗಲ್ ಹೇಳಿದೆ.

ಮೊದಲು ಈ ಆ್ಯಪ್ ಗೆ ಎಂಜಿನಿಯರ್ ಮೋಡ್ ಅಂತಾ ಹೆಸರಿತ್ತು. ಯಾರೂ ಬೇಕಾದ್ರೂ ಸ್ಮಾರ್ಟ್ ಫೋನ್ ಗೆ ಆ್ಯಕ್ಸೆಸ್ ಪಡೆಯಲು ಈ ಆ್ಯಪ್ ಅವಕಾಶ ನೀಡುತ್ತಿತ್ತು. ಈ ಹಿಂದೆ ಕೂಡ ಆ್ಯಪ್ ಬಗ್ಗೆ ವಿವಾದ ಉಂಟಾಗಿತ್ತು. ನಂತರ ಹೆಸರನ್ನು ಫ್ಯಾಕ್ಟರಿ ಮೋಡ್ ಅಂತಾ ಬದಲಾಯಿಸಲಾಗಿತ್ತು.

OxygenOS 5.0.1ನಲ್ಲಿ ಈ ಆ್ಯಪ್ ಬಿಡುಗಡೆಯಾಗಿತ್ತು. ಆ್ಯಪ್ ಡೌನ್ಲೋಡ್ ಮಾಡುವ ಸಂದರ್ಭದಲ್ಲಿ ಗೂಗಲ್ ಸ್ಕ್ರೀನ್ ಮೇಲೆ ಅಲರ್ಟ್ ಒಂದನ್ನು ಕೂಡ ತೋರಿಸ್ತಿದೆ. ಇದು ಬಳಕೆದಾರರ ಡೇಟಾ ಸೋರಿಕೆಗೆ ಕಾರಣವಾಗಬಹುದು. ನಿಮ್ಮ ಡಿವೈಸ್ ಗೆ ಕೂಡ ಈ ಆ್ಯಪ್ ನಿಂದ ತೊಂದರೆ ಇದೆ ಅಂತಾ ಗೂಗಲ್ ಹೇಳಿದೆ. ಹಾಗಾಗಿ ಬಳಕೆದಾರರು ಕೂಡಲೇ ಇದನ್ನು ಅನ್ ಇನ್ ಸ್ಟಾಲ್ ಮಾಡುವುದು ಒಳಿತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...