alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆ ಕಟ್ಟುವವರಿಗೊಂದು ಗುಡ್ ನ್ಯೂಸ್: ಇಳಿಕೆಯಾಗಲಿದೆ ಕಟ್ಟಡ ನಿರ್ಮಾಣ ಸರಕುಗಳ ಜಿ.ಎಸ್.ಟಿ. ದರ

ಸರಕು ಸೇವಾ ತೆರಿಗೆ (ಜಿ.ಎಸ್.ಟಿ.) ಜಾರಿಯಾಗಿ ಒಂದು ವರ್ಷ ಪೂರ್ಣಗೊಂಡಿದೆ. ಇದರ ಪರಿಣಾಮ ತೆರಿಗೆದಾರರ ಸಂಖ್ಯೆಯಲ್ಲೂ ಹೆಚ್ಚಳವಾಗಿದ್ದು, ಸರ್ಕಾರಕ್ಕೆ ಆದಾಯ ಹರಿದು ಬರುತ್ತಿದೆ.

ಇದರ ಮಧ್ಯೆ ಮನೆ ಕಟ್ಟುವವರಿಗೆ ಶುಭ ಸುದ್ದಿಯೊಂದು ಹೊರಬಿದ್ದಿದ್ದು, ಕಟ್ಟಡ ನಿರ್ಮಾಣದ ಸರಕುಗಳ ಮೇಲಿನ ಜಿ.ಎಸ್.ಟಿ. ದರವನ್ನು ಇಳಿಕೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಕಟ್ಟಡ ನಿರ್ಮಾಣ ವಲಯದ ಬೆಳವಣಿಗೆ ಮಂದಗತಿಯಲ್ಲಿರುವ ಕಾರಣ ಉದ್ಯೋಗ ಸೃಷ್ಟಿಯ ಮೇಲೂ ಇದು ಪರಿಣಾಮ ಬೀರುತ್ತಿದೆ. ಈ ಹಿನ್ನಲೆಯಲ್ಲಿ ಕಟ್ಟಡ ನಿರ್ಮಾಣದ ಸರಕುಗಳ ಮೇಲಿನ ಜಿ.ಎಸ್.ಟಿ. ದರ ಇಳಿಕೆ ಮಾಡಿ ಈ ವಲಯವನ್ನು ಪ್ರೋತ್ಸಾಹಿಸುವುದು ಸರ್ಕಾರದ ಉದ್ದೇಶವಾಗಿದೆ.

ನವೆಂಬರ್ ನಲ್ಲಿ ಗುವಾಹತಿಯಲ್ಲಿ ನಡೆಯಲಿರುವ ಜಿ.ಎಸ್.ಟಿ. ಮಂಡಳಿ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದ್ದು, ಇದರ ಜೊತೆಗೆ ಇನ್ನೂ ಹಲವು ಸರಕುಗಳ ಮೇಲಿನ ಜಿ.ಎಸ್.ಟಿ. ದರ ಇಳಿಕೆಯಾಗುವ ಸಾಧ್ಯತೆ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...