alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಯೋ ಸಿಮ್ ಉಚಿತ ಹೋಂ ಡಿಲೆವರಿ ಶುರು

cp-3

ದೇಶದ ಅತ್ಯಂತ ದೊಡ್ಡ 4ಜಿ ನೆಟ್ವರ್ಕಿಂಗ್ ಕಂಪನಿ ರಿಲಾಯನ್ಸ್ ಜಿಯೋ ಗ್ರಾಹಕರಿಗೊಂದು ಖುಷಿ ಸುದ್ದಿ. ಇನ್ಮುಂದೆ ಜಿಯೋ ಸಿಮ್ ಗಾಗಿ ಕ್ಯೂನಲ್ಲಿ ನಿಲ್ಲಬೇಕಾಗಿಲ್ಲ. ದೆಹಲಿ-ಎನ್ ಸಿ ಆರ್ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಜಿಯೋ ಸಿಮ್ ನ ಉಚಿತ ಹೋಂ ಡಿಲಿವರಿ ಶುರುವಾಗಿದೆ.

ಸೆಪ್ಟೆಂಬರ್ 5 ರಂದು ರಿಲಾಯನ್ಸ್ ಜಿಯೋ, ಉಳಿದ ಟೆಲಿಕಾಂ ಕಂಪನಿಗಳು ಬೆವರಿಳಿಯುವಂತೆ ಮಾಡಿತ್ತು. ವೆಲ್ ಕಂ ಆಫರ್ ಮೂಲಕ ಜಿಯೋ ಸಿಮ್ ಬಿಡುಗಡೆ ಮಾಡಿ ಜನರು ನಿದ್ದೆಯಲ್ಲೂ ಕನವರಿಸುವಂತೆ ಮಾಡಿತ್ತು. ಡಿಸೆಂಬರ್ 31ರವರೆಗೆ ವೆಲ್ ಕಂ ಆಫರ್ ಮೂಲಕ ಎಲ್ಲವೂ ಉಚಿತವಾಗಿ ಸಿಗುತ್ತೆ ಎಂಬ ಸುದ್ದಿ ತಿಳಿದ ಜನ ಸಿಮ್ ಪಡೆಯಲು ಕ್ಯೂನಲ್ಲಿ ನಿಂತಿದ್ದರು. ಅನೇಕರಿಗೆ ಈವರೆಗೂ ಜಿಯೋ ಸಿಮ್ ಸಿಕ್ಕಿಲ್ಲ. ಜನರ ಪ್ರತಿಕ್ರಿಯೆ ನೋಡಿದ ಕಂಪನಿ ಉಚಿತ ಹೋಂ ಡಿಲಿವರಿಗೆ ಮುಂದಾಗಿದೆ. ಮನೆಯಲ್ಲಿಯೇ ಕುಳಿತು ಗ್ರಾಹಕರು ಸಿಮ್ ಪಡೆಯಬಹುದಾಗಿದೆ.

ಇನ್ಮೊಂದು ಖುಷಿ ಸುದ್ದಿ ನೀಡುವ ತಯಾರಿಯಲ್ಲಿ ರಿಲಾಯನ್ಸ್ ಜಿಯೋ ಕಂಪನಿ ಇದೆ ಎನ್ನಲಾಗ್ತಾ ಇದೆ. ಡಿಸೆಂಬರ್ 31ರವರೆಗೆ ಇದ್ದ ವೆಲ್ ಕಂ ಆಫರ್ ಗಡುವನ್ನು ಮಾರ್ಚ್ 2017 ರವರೆಗೆ ವಿಸ್ತರಿಸಲಿದೆ ಎಂದು ಮೂಲಗಳು ಹೇಳ್ತಾ ಇವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...