alex Certify
ಕನ್ನಡ ದುನಿಯಾ       Mobile App
       

Kannada Duniya

ಚಿನ್ನ ಖರೀದಿಸುವವರಿಗೊಂದು ‘ಗುಡ್ ನ್ಯೂಸ್’

ಆಭರಣ ಕೊಳ್ಳೋರಿಗೆ ಇದು ಶುಭ ಸುದ್ದಿ. ವಾರಾಂತ್ಯಕ್ಕೆ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರೀ ಕುಸಿತ ಕಂಡಿದೆ. ಭಾರತ ಮತ್ತು ಚೀನಾದ ಬಿಲಿಯನ್ ಮಾರುಕಟ್ಟೆಯಲ್ಲಿ ಪ್ರತಿ 10 ಗ್ರಾಂ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಕ್ರಮವಾಗಿ 450 ರೂಪಾಯಿ ಮತ್ತು 1000 ರೂಪಾಯಿ ಇಳಿಕೆ ಕಂಡು ಬಂದಿದೆ.

ಶನಿವಾರದ ಅಂತ್ಯಕ್ಕೆ ಪ್ರತಿ 10 ಗ್ರಾಂ ಚಿನ್ನದ ಬೆಲೆ ಈಗ 30,250 ರೂಪಾಯಿಗಳಿಗೆ ನಿಗದಿಯಾಗಿದೆ. ಕಳೆದ ವಾರ 10 ಗ್ರಾಂ ಚಿನ್ನದ ದರ 30,700 ರೂಪಾಯಿಗಳಷ್ಟಿತ್ತು. ಶನಿವಾರದ ಅಂತ್ಯಕ್ಕೆ ಚಿನ್ನದ ಬೆಲೆ 90 ರೂಪಾಯಿ ಇಳಿಕೆ ಕಂಡಿದೆ. ಒಂದು ವಾರದ ಅವಧಿಯಲ್ಲಿ 450 ರೂಪಾಯಿ ಚಿನ್ನದ ಬೆಲೆ ಕಡಿಮೆಯಾಗಿದೆ.

ಬೆಳ್ಳಿಯ ಬೆಲೆಯಲ್ಲಿ ಕೂಡ ಭಾರೀ ಬದಲಾವಣೆಗಳಾಗಿದೆ. ಆಗಸ್ಟ್ 11 ರಂದು 39,000 ರೂಪಾಯಿಗಳಷ್ಟಿದ್ದ ಕೆಜಿ ಬೆಳ್ಳಿ ಈ ವಾರ 38,000 ರೂಪಾಯಿಗಳಿಗೆ ಇಳಿದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೂಡ ಹೂಡಿಕೆದಾರರು ಹಳದಿ ಲೋಹವಾದ ಬಂಗಾರ ಮತ್ತು ಬೆಳ್ಳಿಯ ಮೇಲೆ ಹೂಡಿಕೆ ಮಾಡುವ ಒಲವು ತೋರಿಸ್ತಿದ್ದಾರೆ. ಮೇ 2017ರ ನಂತರದಲ್ಲಿ ದಾಖಲೆಯ ಪ್ರಮಾಣದಲ್ಲಿ ಕುಸಿದ ಚಿನ್ನ ಮತ್ತು ಬೆಳ್ಳಿಯ ಬೆಲೆ ಇದಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...