alex Certify
ಕನ್ನಡ ದುನಿಯಾ       Mobile App
       

Kannada Duniya

ಚಿನ್ನ ಖರೀದಿದಾರರಿಗೆ ‘ಶಾಕಿಂಗ್’ ಸುದ್ದಿ…!

ಆಭರಣ ಪ್ರಿಯರಿಗೆ ಬೇಸರದ ಸುದ್ದಿ ಇದೆ. ಮತ್ತೆ ಬಂಗಾರದ ಬೆಲೆ ಗಗನಕ್ಕೇರಿದೆ. ಕಳೆದ 14 ತಿಂಗಳುಗಳಲ್ಲೇ ಚಿನ್ನದ ದರ ಭಾರೀ ಏರಿಕೆ ಕಂಡಿದ್ದು, 10 ಗ್ರಾಂ ಗೆ 31,450 ರೂಪಾಯಿ ಆಗಿದೆ.  ಸ್ಥಳೀಯ ಆಭರಣ ವ್ಯಾಪಾರಿಗಳು ಹೆಚ್ಚಿನ ಪ್ರಮಾಣದಲ್ಲಿ ಖರೀದಿಗೆ ಮುಗಿಬಿದ್ದಿದ್ದರಿಂದ ಚಿನ್ನದ ದರ ಹೆಚ್ಚಳವಾಗಿದೆ.

ಇವತ್ತು ಬಂಗಾರ ಪ್ರತಿ ಗ್ರಾಂಗೆ 350 ರೂಪಾಯಿ ಹೆಚ್ಚಳವಾಗಿದೆ. ಬೆಳ್ಳಿ ದರ ಕೂಡ ಗಗನಮುಖಿಯಾಗಿದ್ದು, 1,100 ರೂ. ಏರಿಕೆಯೊಂದಿಗೆ 41,000 ದ ಗಡಿ ದಾಟಿದೆ. 99.9 ಹಾಗೂ 99.5 ಪ್ಯೂರಿಟಿಯ ಬಂಗಾರದ ಬೆಲೆಯಲ್ಲಿ ದಿಢೀರ್ ಏರಿಕೆಯಾಗಿದೆ.

ಆದ್ರೆ ಬೆಳ್ಳಿ ನಾಣ್ಯಗಳ ಬೆಲೆಯಲ್ಲಿ ಯಾವುದೇ ಏರಿಳಿತವಾಗಿಲ್ಲ. 100 ನಾಣ್ಯಗಳ ಖರೀದಿ ದರ 74,000 ರೂಪಾಯಿ ಇದ್ರೆ ಮಾರಾಟ ದರ 75,000 ರೂಪಾಯಿ ಇದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...