alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ ಚಿನ್ನ ಕಳ್ಳ ಸಾಗಣೆ ಕುರಿತ ಸುದ್ದಿ

gold-cc

ನವದೆಹಲಿ: ಚಿನ್ನ ಕಳ್ಳ ಸಾಗಣೆಯಲ್ಲಿ ಹೆಚ್ಚಳವಾಗಿದ್ದು, ಪ್ರಸಕ್ತ ಸಾಲಿನಲ್ಲಿ ಸುಮಾರು 300 ಟನ್ ಸ್ಮಗ್ಲಿಂಗ್ ಆಗಿದೆ. ಅಲ್ಲದೇ, ಸರ್ಕಾರಕ್ಕೆ ಸುಮಾರು 6,700 ಕೋಟಿ ರೂಪಾಯಿ ಆದಾಯ ನಷ್ಟವಾಗಿದೆ ಎಂದು ಹೇಳಲಾಗಿದೆ.

ಚಿನ್ನ ಕಳ್ಳ ಸಾಗಣೆ ಹೆಚ್ಚಾಗಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುವ ಜೊತೆಗೆ ಚಿನ್ನ ಸಂಸ್ಕರಣೆಗಾರರಿಗೂ ಲಾಭ ಕಡಿಮೆಯಾಗಿದೆ. ಗಣಿಗಳಿಂದ ಚಿನ್ನದ ಅದಿರು ಆಮದು ಬದಲಿಗೆ, ಬಳಸಿದ ಚಿನ್ನವನ್ನೇ ಹೆಚ್ಚಾಗಿ ಸಂಸ್ಕರಿಸಲು ಭಾರತೀಯ ಚಿನ್ನ ಸಂಸ್ಕರಣೆಗಾರರು ಮುಂದಾಗಿದ್ದಾರೆ. ಇದರೊಂದಿಗೆ ಚಿನ್ನವನ್ನು ಆಮದು ಮಾಡುತ್ತಿರುವ ಬ್ಯಾಂಕ್ ಗಳು, ದೊಡ್ಡ ಜುವೆಲ್ಲರ್ಸ್ ಗಳಿಗೆ ಸಮಸ್ಯೆಯಾಗಿದೆ. ಚಿನ್ನದ ದರ ಹೆಚ್ಚಾಗುತ್ತಿರುವುದರಿಂದ ಕಳ್ಳ ಸಾಗಣೆಯೂ ಹೆಚ್ಚಾಗಿದೆ.

ದುಬೈ, ಸಿಂಗಾಪುರದಲ್ಲಿ ಕಡಿಮೆ ಬೆಲೆ ಇರುವುದರಿಂದ ಭಾರತಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಚಿನ್ನ ಕಳ್ಳ ಸಾಗಣೆಯಾಗುತ್ತದೆ. ಆಮದು ಸುಂಕ ತಪ್ಪಿಸಲು ಕಳ್ಳ ಸಾಗಣೆ ಮಾಡಲಾಗುತ್ತದೆ. ಕಳ್ಳ ಸಾಗಣೆ ಹೆಚ್ಚಾಗಿರುವುದರಿಂದ ಆಮದು ಸುಂಕವನ್ನು ಕಡಿಮೆ ಮಾಡಬೇಕಾಗುತ್ತದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...