alex Certify
ಕನ್ನಡ ದುನಿಯಾ       Mobile App
       

Kannada Duniya

ಖರೀದಿದಾರರ ಮೊಗದಲ್ಲಿ ಮಂದಹಾಸ ಮೂಡಿಸಿದ ‘ಚಿನ್ನ’

ಚಿನ್ನದ ಬೆಲೆಯಲ್ಲಿ 335 ರೂ. ನಷ್ಟು ಇಳಿಕೆ ಕಂಡು ಪ್ರತಿ 10 ಗ್ರಾಂಗೆ 30,765 ರೂ. ಗಳಿಗೆ ಮಾರಾಟವಾಗಿದೆ. ಹಾಗೆಯೇ ಬೆಳ್ಳಿ ಬೆಲೆಯಲ್ಲಿ 1,310 ರೂ. ಇಳಿಕೆಯಾಗಿ ಪ್ರತಿ ಕೆಜಿಗೆ 40,205 ರೂ. ಗಳಿಗೆ ಮಾರಾಟವಾಗಿದೆ.

ಚಿನ್ನದ ಬೆಲೆಯಲ್ಲಿ ದೀಪಾವಳಿ ವೇಳೆಗೆ ಭಾರಿ ಏರಿಕೆಯಾಗುತ್ತದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದ ಮಧ್ಯೆ, ಸೋಮವಾರ ಚಿನ್ನ-ಬೆಳ್ಳಿ ಧಾರಣೆಯಲ್ಲಿ ಇಳಿಕೆ ಕಾಣುವ ಮೂಲಕ ಖರೀದಿದಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಐದೂವರೆ ತಿಂಗಳ ಹಿಂದಿನ ಕನಿಷ್ಠ ಮಟ್ಟಕ್ಕೆ ಕುಸಿತ ಕಂಡಿರುವ ಕಾರಣ, ಸ್ಥಳೀಯ ಚಿನ್ನಾಭರಣ ವರ್ತಕರು ಕಡಿಮೆ ಪ್ರಮಾಣದಲ್ಲಿ ವಹಿವಾಟು ನಡೆಸಿದ್ದು, ಚಿನ್ನ-ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಾಣಲು ಕಾರಣವೆನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...