alex Certify
ಕನ್ನಡ ದುನಿಯಾ       Mobile App
       

Kannada Duniya

ಅಕ್ಷಯ ತೃತೀಯ ಎಫೆಕ್ಟ್! ಗಗನಕ್ಕೇರುತ್ತಿದೆ ಚಿನ್ನದ ಬೆಲೆ

ಮುಂಬೈ: ಅಕ್ಷಯ ತೃತೀಯ ಸಂದರ್ಭದಲ್ಲಿ ಚಿನ್ನಾಭರಣ ಖರೀದಿಸಿದರೆ ಒಳಿತಾಗುತ್ತದೆ ಎಂಬ ನಂಬಿಕೆಯಿಂದ ಹೆಚ್ಚಿನವರು ಚಿನ್ನವನ್ನು ಖರೀದಿಸುತ್ತಾರೆ. ಹೀಗೆ ಅಕ್ಷಯ ತೃತೀಯ ದಿನದಂದು ಚಿನ್ನಾಭರಣ ಖರೀದಿಸಬೇಕೆಂದುಕೊಂಡವರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ.

ಸೋಮವಾರ ಮುಂಬೈ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 31,000 ರೂ. ಗಡಿ ದಾಟಿದೆ. 10 ಗ್ರಾಂ ಆಭರಣ ಚಿನ್ನದ ಬೆಲೆ 275 ರೂ. ಏರಿಕೆಯಾಗಿ 31,095 ರೂ. ತಲುಪಿದೆ. ಅಪರಂಜಿ ಚಿನ್ನದ ಬೆಲೆ ಕೂಡ 275 ರೂ. ಏರಿಕೆಯಾಗಿದ್ದು, 31,245 ರೂ. ಗೆ ತಲುಪಿದೆ. ಅದೇ ರೀತಿ ಬೆಳ್ಳಿ ಬೆಲೆಯಲ್ಲಿಯೂ ಏರಿಕೆಯಾಗಿದ್ದು, ಪ್ರತಿ ಕೆ.ಜಿ.ಗೆ 305 ರೂ. ಹೆಚ್ಚಳವಾಗಿ 38,785 ರೂ. ತಲುಪಿದೆ.

ಜಾಗತಿಕ ಮಾರುಕಟ್ಟೆಯ ಪರಿಣಾಮ, ಅಕ್ಷಯ ತೃತೀಯ, ಮದುವೆ ಸೀಸನ್ ಕಾರಣದಿಂದ ಚಿನ್ನದ ಬೆಲೆ ಏರಿಕೆ ಹಾದಿಯಲ್ಲಿದೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...