alex Certify ಯುಗಾದಿಗೆ ಚಿನ್ನಾಭರಣ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಶಾಕಿಂಗ್ ನ್ಯೂಸ್: ಒಂದೇ ದಿನ ಒಂದು ಸಾವಿರಕ್ಕೂ ಅಧಿಕ ಹೆಚ್ಚಳವಾದ ಚಿನ್ನದ ದರ 68,420 ರೂ.ಗೆ ಏರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುಗಾದಿಗೆ ಚಿನ್ನಾಭರಣ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಶಾಕಿಂಗ್ ನ್ಯೂಸ್: ಒಂದೇ ದಿನ ಒಂದು ಸಾವಿರಕ್ಕೂ ಅಧಿಕ ಹೆಚ್ಚಳವಾದ ಚಿನ್ನದ ದರ 68,420 ರೂ.ಗೆ ಏರಿಕೆ

ನವದೆಹಲಿ: ಚಿನ್ನದ ದರ ಗಗನಕ್ಕೇರಿದೆ. ಜಾಗತಿಕ ಬೆಳವಣಿಗೆ ಆಧರಿಸಿ ದೇಶಿಯ ಮಾರುಕಟ್ಟೆಯಲ್ಲಿಯೂ ಚಿನ್ನದ ದರ ಏರಿಕೆ ಕಂಡಿದೆ.

ಜಾಗತಿಕ ಮಟ್ಟದಲ್ಲಿ ಬೇಡಿಕೆ ಹೆಚ್ಚಳವಾಗಿದ್ದರಿಂದ 24 ಕ್ಯಾರಟ್ ಶುದ್ದ ಚಿನ್ನದ ದರ 10 ಗ್ರಾಂ 1070 ರೂ. ಹೆಚ್ಚಳವಾಗಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 68,420 ರೂ.ಗೆ ಮಾರಾಟವಾಗಿದೆ. ಹಿಂದಿನ ವಹಿವಾಟಿನಲ್ಲಿ ಪ್ರತಿ 10 ಗ್ರಾಂ ಚಿನ್ನದ ದರ 67,350 ರೂಪಾಯಿ ಇತ್ತು.

ಬೆಳ್ಳಿ ದರ ಕೆಜಿಗೆ 1120 ರೂ. ಹೆಚ್ಚಳವಾಗಿದ್ದು, 78,570 ರೂ.ಗೆ ತಲುಪಿದೆ. ಹಿಂದಿನ ದರ 77,450 ರೂಪಾಯಿ ಇತ್ತು. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಪ್ರತಿ ಔನ್ಸ್ ಗೆ 2265.73 ಡಾಲರ್ ನಷ್ಟಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...