alex Certify
ಕನ್ನಡ ದುನಿಯಾ       Mobile App
       

Kannada Duniya

ಚಿನ್ನ, ಬೆಳ್ಳಿ ಹೂಡಿಕೆದಾರರಿಗೊಂದು ಶುಭ ಸುದ್ದಿ

silver gold

ನವದೆಹಲಿ: ಷೇರುಪೇಟೆಯಲ್ಲಿ ಕಂಪನಿಗಳ ಷೇರುಗಳಿಗಿಂತ ಚಿನ್ನ ಮತ್ತು ಬೆಳ್ಳಿ ಮೇಲಿನ ಹೂಡಿಕೆ ಹೆಚ್ಚು ಲಾಭಕರವಾಗಿದೆ. ಈ ವರ್ಷ ಬೆಳ್ಳಿ, ಹೂಡಿಕೆದಾರರಿಗೆ ಶೇ.41 ರವರೆಗೆ ರಿಟರ್ನ್ಸ್ ನೀಡಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಹೆಚ್ಚಳವಾಗಿದ್ದು, ಇವುಗಳ ಮೇಲೆ ಹೂಡಿಕೆ ಮಾಡಿದವರಿಗೆ ಶೇ.41 ರಷ್ಟು ಲಾಭವಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಚಿನ್ನದ ಬೆಲೆಯಲ್ಲಿ ಶೇ.22.29 ರಷ್ಟು ಹೆಚ್ಚಳವಾಗಿದ್ದರೆ, ಬೆಳ್ಳಿ ಬೆಲೆಯಲ್ಲಿ ಶೇ. 40.69ರಷ್ಟು ಹೆಚ್ಚಳವಾಗಿದೆ. ಚಿನ್ನ ಮತ್ತು ಬೆಳ್ಳಿ ಬೆಲೆಗೆ ಹೋಲಿಕೆ ಮಾಡಿದಾಗ, ಷೇರುಪೇಟೆಯಲ್ಲಿನ ಸಂವೇದಿ ಸೂಚ್ಯಂಕ ಕೇವಲ ಶೇ.7.79 ರಷ್ಟು ಏರಿಕೆಯಾಗಿದೆ. ಹಾಗಾಗಿ, ಚಿನ್ನ, ಬೆಳ್ಳಿ ಮೇಲಿನ ಹೂಡಿಕೆ ಹೆಚ್ಚು ಲಾಭಕರ ಎನ್ನಲಾಗಿದೆ.

2015 ರ ಡಿಸೆಂಬರ್ ನಲ್ಲಿ 10 ಗ್ರಾಂ ಚಿನ್ನಕ್ಕೆ 25,390 ರೂ. ಬೆಲೆ ಇತ್ತು. ಇದೇ ಆಗಸ್ಟ್ 12ರಂದು ಪ್ರತಿ 10 ಗ್ರಾಂ ಚಿನ್ನಕ್ಕೆ 31,050 ರೂ. ಬೆಲೆ ಇದೆ. ಅದೇ ರೀತಿ ಕಳೆದ ವರ್ಷದ ಆಗಸ್ಟ್ ನಲ್ಲಿ ಕೆ.ಜಿ.ಗೆ 33,300 ರೂ. ಇದ್ದ ಬೆಳ್ಳಿ ದರ 46,850 ರೂ.ಗೆ ಹೆಚ್ಚಳವಾಗಿದೆ. ಹಾಗಾಗಿ, ಹೂಡಿಕೆಗೆ ಚಿನ್ನ, ಬೆಳ್ಳಿ ಬೆಸ್ಟ್ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...