alex Certify
ಕನ್ನಡ ದುನಿಯಾ       Mobile App
       

Kannada Duniya

ಏರಿಕೆಯಾಯ್ತು ಚಿನ್ನ, ಬೆಳ್ಳಿ ಬೆಲೆ

ಮುಂಬೈ: ಸರಕು ಮತ್ತು ಸೇವಾ ತೆರಿಗೆ, 50,000 ರೂ. ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಚಿನ್ನಾಭರಣ ಖರೀದಿಗೆ ಪ್ಯಾನ್ ಕಾರ್ಡ್ ಕಡ್ಡಾಯ ಹಾಗೂ ಚಿನ್ನ ಖರೀದಿ ಮಿತಿ ಕುರಿತಾಗಿ ಪ್ರಸ್ತುತ ಹೆಚ್ಚಿನ ಚರ್ಚೆಯಾಗ್ತಿದೆ.

ದೀಪಾವಳಿ ಕೂಡ ಸಮೀಪಿಸುತ್ತಿದ್ದು, ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಸೋಮವಾರ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಏರಿಕೆಯಾಗಿದೆ.

ಚಿನ್ನ ಪ್ರತಿ 10 ಗ್ರಾಂಗೆ 300 ರೂ. ಏರಿಕೆಯಾಗಿ 29,660 ರೂ.ಗೆ ಮಾರಾಟವಾಗಿದೆ. ಬೆಳ್ಳಿ ಬೆಲೆ ಕೆ.ಜಿ.ಗೆ 670 ರೂ. ಏರಿಕೆಯಾಗಿ 39,520 ರೂ.ಗೆ ಮಾರಾಟವಾಗಿದೆ.

ಸ್ಟಾಂಡರ್ಡ್ ಚಿನ್ನ(99.5 ಶುದ್ಧತೆ) 10 ಗ್ರಾಂಗೆ 300 ರೂ. ಏರಿಕೆಯಾಗಿ 29,660 ರೂ. ತಲುಪಿದೆ. ಶೇ. 99.9 ಶುದ್ಧತೆಯ ಚಿನ್ನ 10 ಗ್ರಾಂಗೆ 29,810 ರೂ. ತಲುಪಿದೆ.

ಚಿನ್ನಾಭರಣ ಖರೀದಿಗೆ ಬೇಡಿಕೆ ಬಂದ ಹಿನ್ನಲೆಯಲ್ಲಿ ಮತ್ತು ಜಾಗತಿಕ ಮಾರುಕಟ್ಟೆಯ ಬೆಲೆಯನ್ನಾಧರಿಸಿ ದೇಶೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗಿದೆ. ಹಬ್ಬದ ಸೀಸನ್ ಇರುವುದು ಕೂಡ ಬೆಲೆ ಏರಿಕೆಗೆ ಕಾರಣವಾಗಿದೆ. ನಾಣ್ಯ ತಯಾರಕರಿಂದ ಬೇಡಿಕೆ ಬಂದ ಹಿನ್ನಲೆಯಲ್ಲಿ ಬೆಳ್ಳಿ ಬೆಲೆಯಲ್ಲಿ ಹೆಚ್ಚಳವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...