alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ರಂಪ್ ಎಫೆಕ್ಟ್! ಗನಕ್ಕೇರಿದ ಚಿನ್ನದ ಬೆಲೆ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾ ವಹಿವಾಟಿನಲ್ಲಿ ಹೆಚ್ಚು ಸುಂಕವನ್ನು ಪ್ರಸ್ತಾಪಿಸಿದ ನಂತರ, ಚಿನ್ನದ ಬೆಲೆಯಲ್ಲಿ ಏರಿಕೆ ಕಂಡಿದೆ.

ಟ್ರಂಪ್ ಹೊಸ ಸುಂಕದಲ್ಲಿ 100 ಶತಕೋಟಿ ಡಾಲರ್ ನಷ್ಟು ಮೊತ್ತವನ್ನು ಪ್ರಸ್ತಾಪಿಸಿದ ನಂತರ ಹೂಡಿಕೆದಾರರು ಸುರಕ್ಷತೆಗಾಗಿ ಚಿನ್ನದ ಮೇಲೆ ಹೂಡಿಕೆ ಮಾಡತೊಡಗಿದ್ದಾರೆ. ಪರಿಣಾಮ ಚಿನ್ನದ ಬೆಲೆಯಲ್ಲಿ ಏರಿಕೆಯಾಗ್ತಿದೆ.

ದೇಶೀಯ ಮಾರುಕಟ್ಟೆಯಲ್ಲಿಯೂ ಚಿನ್ನದ ಬೆಲೆ ಏರಿಕೆ ಕಂಡಿದೆ. ಪ್ರತಿ 10 ಗ್ರಾಂ ಚಿನ್ನದ ಬೆಲೆ 131 ರೂ. ಏರಿಕೆಯಾಗಿದ್ದು, 30,765 ರೂ. ತಲುಪಿದೆ. ಅದೇ ರೀತಿ ಬೆಳ್ಳಿಯ ಬೆಲೆಯಲ್ಲಿ ಏರಿಕೆಯಾಗಿದೆ.

ಇತ್ತೀಚೆಗೆ ಏರಿಳಿತದ ಹಾದಿಯಲ್ಲಿದ್ದ ಚಿನ್ನದ ಬೆಲೆ ಮದುವೆ ಸೀಸನ್ ಕಾರಣದಿಂದ ಏರಿಕೆಯಾಗಬಹುದೆಂದು ಹೇಳಲಾಗಿತ್ತಾದರೂ, ಒಂದಷ್ಟು ಬೆಲೆ ಕಡಿಮೆಯಾಗಿ ಖರೀದಿದಾರರಲ್ಲಿ ಮಂದಹಾಸ ಮೂಡಿಸಿತ್ತು. ಆದರೆ, ಜಾಗತಿಕ ಮಾರುಕಟ್ಟೆಯಲ್ಲಿನ ಪರಿಣಾಮದಿಂದ ಶುಕ್ರವಾರ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...