alex Certify
ಕನ್ನಡ ದುನಿಯಾ       Mobile App
       

Kannada Duniya

1947 ರಲ್ಲಿ ಚಿನ್ನದ ಬೆಲೆ ಎಷ್ಟಿತ್ತು ಗೊತ್ತಾ…?

ಭಾರತ ಎಂದ್ರೆ ಚಿನ್ನ. ಭಾರತೀಯರಿಗಿರುವಷ್ಟು ಚಿನ್ನದ ಮೇಲಿನ ಪ್ರೀತಿ ಮತ್ಯಾರಿಗೂ ಇರಲು ಸಾಧ್ಯವಿಲ್ಲ. ಹಿಂದಿನ ಕಾಲದಲ್ಲಿ ಉಳಿತಾಯವೆಂದ್ರೆ ಬಂಗಾರ ಖರೀದಿಯಾಗಿತ್ತು. ಆಗಸ್ಟ್ 15ರಂದು ದೇಶ ಸ್ವಾತಂತ್ರ್ಯ ದಿನವನ್ನು ಆಚರಿಸ್ತಿದೆ. 1947ರಲ್ಲಿ ಸ್ವಾತಂತ್ರ್ಯ ಸಿಕ್ಕ ದಿನ ಭಾರತದಲ್ಲಿ ಚಿನ್ನದ ಬೆಲೆ ಎಷ್ಟಿತ್ತು ಗೊತ್ತಾ?

ಚಿನ್ನಕ್ಕೆ ಎಂದೂ ಬೇಡಿಕೆ ಕಡಿಮೆಯಾಗೋದಿಲ್ಲ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೂಡ ಚಿನ್ನವನ್ನು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾಗಿದೆ. ಕರೆನ್ಸಿ ಮುದ್ರಣದ ವೇಳೆ ಚಿನ್ನದ ಬೆಲೆಯನ್ನು ಪರಿಗಣಿಸಲಾಗುತ್ತದೆ. ಚಿನ್ನದ ಬೆಲೆ 71 ವರ್ಷಗಳಲ್ಲಿ ನಿರಂತರ ಏರಿಕೆ ಕಾಣ್ತಿದೆ. 1947 ರಲ್ಲಿ 10 ಗ್ರಾಂ ಚಿನ್ನದ ಬೆಲೆ 88.62 ರೂಪಾಯಿಯಿತ್ತು. ಈಗ ದೆಹಲಿ ಚಿನ್ನದ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ 30,630 ರೂಪಾಯಿಯಾಗಿದೆ.

1948 ರಲ್ಲಿ ಚಿನ್ನದ ಬೆಲೆ ಏರಿಕೆಯಾಗಿ 10 ಗ್ರಾಂ ಚಿನ್ನದ ಬೆಲೆ 95.87 ರೂಪಾಯಿಯಾಗಿತ್ತು. 1953 ರಲ್ಲಿ ಚಿನ್ನದ ಬೆಲೆ ಮತ್ತೆ ಇಳಿಕೆ ಕಂಡಿತ್ತು. 10 ಗ್ರಾಂ ಚಿನ್ನದ ಬೆಲೆ 73.06 ರೂಪಾಯಿಯಾಗಿತ್ತು. 1959ರಲ್ಲಿ ಚಿನ್ನದ ಬೆಲೆ 100 ರೂಪಾಯಿ ಗಡಿ ದಾಟಿತ್ತು. 1964ರಲ್ಲಿ ಮತ್ತೆ ಇಳಿಕೆ ಕಂಡ ಚಿನ್ನದ ಬೆಲೆ 63.25 ರೂಪಾಯಿಯಾಗಿತ್ತು.

1972 ರಲ್ಲಿ 10 ಗ್ರಾಂ ಚಿನ್ನದ ಬೆಲೆ 200 ರೂಪಾಯಿ ಗಡಿ ದಾಟಿತ್ತು. 1974 ರಲ್ಲಿ 1 ಗ್ರಾಂ ಚಿನ್ನದ ಬೆಲೆ 500 ರೂಪಾಯಿಯಾದ್ರೆ 1980ರಲ್ಲಿ 1000 ರೂಪಾಯಿಗೆ ಬಂದು ನಿಂತಿತ್ತು. 1985 ರಲ್ಲಿ 2 ಸಾವಿರ, 1996 ರಲ್ಲಿ 5160 ಹಾಗೂ 2007 ರಲ್ಲಿ 10,800 ಹಾಗೂ 2010 ರಲ್ಲಿ 10 ಗ್ರಾಂ ಚಿನ್ನದ ಬೆಲೆ 20,000 ರೂಪಾಯಿಯಾಯ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...