alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿ ಚಿತ್ರವುಳ್ಳ ಚಿನ್ನದ ರಾಖಿಗೆ ಬಲು ಡಿಮ್ಯಾಂಡ್

ರಾಖಿ ಹಬ್ಬ ಬರುತ್ತಿದ್ದಂತೆ ರಾಖಿ ತಯಾರಿಕೆ ವ್ಯವಹಾರವೂ ಜೋರಾಗಿ ಸಾಗಿದೆ. ಸೂರತ್ ನಲ್ಲಿ ಆಭರಣ ತಯಾರಕರು 50 ಸಾವಿರ ರೂ. ಮೌಲ್ಯದ ರಾಖಿ ತಯಾರಿಸಿದ್ದು ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಉಬ್ಬು ಚಿತ್ರಗಳಿರುವುದು ವಿಶೇಷ.

22 ಕ್ಯಾರೆಟ್ ಚಿನ್ನದ ಹೊದಿಕೆಯ ಮೋದಿ, ಯೋಗಿ ಚಿತ್ರ ಇರುವ ರಾಖಿ ಮಾರಾಟ ಜೋರಾಗಿದೆ. ಹಾಟ್ ಕೇಕ್ ನಂತೆ ಖರ್ಚಾಗುತ್ತಿವೆ ಎಂದು ಮಾರಾಟಗಾರರು ತಿಳಿಸಿದ್ದಾರೆ.

ಇದೇ ವೇಳೆ ಪ್ರತಿಕ್ರಿಯೆ ನೀಡಿರುವ ಶ್ರದ್ಧಾ ಷಾ ಎಂಬ ಗ್ರಾಹಕಿ, ನರೇಂದ್ರ ಮೋದಿ ಚಿತ್ರವುಳ್ಳ ರಾಖಿಯನ್ನು ನನ್ನ ಸಹೋದರನಿಗೆ ಕಟ್ಟುವ ಮೂಲಕ ಪ್ರಧಾನಿ ಮೋದಿಯಂತೆ ದೊಡ್ಡ ಸಾಧನೆ ಮಾಡು ಎಂದು ಹಾರೈಸುವೆ ಎಂದಿದ್ದಾರೆ.

ಚಿನ್ನದ ರಾಖಿಗಳ ಬೆಲೆ 50 ಸಾವಿರದಿಂದ 70 ಸಾವಿರ ರೂಪಾಯಿವರೆಗೆ ಇದೆ. ಈ ಕುರಿತು ಅಂಗಡಿ ಮಾಲೀಕ ಮಿಲನ್ ಪ್ರತಿಕ್ರಿಯಿಸಿದ್ದು, ಮೋದಿ, ಯೋಗಿ ಅವರ ಚಿತ್ರವಿರುವ 50 ರಾಖಿಗಳನ್ನು ತಯಾರು ಮಾಡಿದ್ದು, 47 ಈಗಾಗಲೇ ಮಾರಾಟವಾಗಿದೆ. ಇನ್ನಷ್ಟು ಬೇಡಿಕೆ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವರು ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ಪ್ರೇರೇಪಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...