alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರಾವಣದ ಹೊಸ್ತಿಲಲ್ಲೇ ಖರೀದಿದಾರರಿಗೆ ಸಂತಸ ತಂದ ‘ಚಿನ್ನ’

ಶನಿವಾರದಂದು ಏರಿಕೆ ಕಂಡಿದ್ದ ಚಿನ್ನದ ಬೆಲೆ ಸೋಮವಾರದಂದು ಕೊಂಚ ಇಳಿಕೆ ಕಂಡಿದೆ. 40 ರೂ. ಇಳಿಕೆ ಕಾಣುವ ಮೂಲಕ 10 ಗ್ರಾಂ ಗೆ 30,660 ರೂ. ತಲುಪಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆ ಕುಸಿತ ಕಂಡಿದೆ.

ಆದರೆ ಬೆಳ್ಳಿ ಬೆಲೆಯಲ್ಲಿ ಮತ್ತೆ 50 ರೂ. ಏರಿಕೆಯಾಗಿದ್ದು, ಪ್ರತಿ ಕೆ.ಜಿ. ಗೆ 39,050 ರೂ. ತಲುಪಿದೆ. ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿದೆ.

ಮುಂದಿನ ವಾರದಿಂದ ವಿವಾಹ ಸೇರಿದಂತೆ ಶುಭ ಸಮಾರಂಭಗಳು ಸಾಲು ಸಾಲಾಗಿ ಬರಲಿರುವ ಹಿನ್ನೆಲೆಯಲ್ಲಿ ಸ್ಥಳೀಯ ವರ್ತಕರು ಖರೀದಿಗೆ ಮುಂದಾಗಿದ್ದರೂ ಬೆಲೆ ಇಳಿಕೆ ಕಂಡಿದ್ದು, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಚಿನ್ನದ ಬೆಲೆ ಇಳಿಕೆ ಕಾಣುತ್ತಿರುವ ಕಾರಣ ಮತ್ತೆ ಇಳಿಕೆಯಾಗಬಹುದಾ ಎಂಬ ನಿರೀಕ್ಷೆ ಗ್ರಾಹಕರಲ್ಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...