alex Certify
ಕನ್ನಡ ದುನಿಯಾ       Mobile App
       

Kannada Duniya

ಇಂದು ಮತ್ತೆ ಏರಿಕೆಯಾಯ್ತು ಬಂಗಾರದ ಬೆಲೆ

ಹಬ್ಬದ ಋತುವಿನಲ್ಲಿ ಚಿನ್ನ ಕೈ ಸುಡ್ತಿದೆ. ಕಳೆದ ಎರಡು ದಿನಗಳಿಂದ ಬಂಗಾರದ ಬೆಲೆ ಏರುತ್ತಿದೆ. ಶುಕ್ರವಾರ ಕೂಡ ಬಂಗಾರದ ಬೆಲೆಯಲ್ಲಿ 140 ರೂಪಾಯಿ ಏರಿಕೆ ಕಂಡಿದೆ. ಕಳೆದ ಎರಡು ದಿನಗಳಲ್ಲಿ ಬಂಗಾರದ ಬೆಲೆ 260 ರೂಪಾಯಿ ಏರಿಕೆ ಕಂಡಂತಾಗಿದೆ. ಗುರುವಾರ 120 ರೂಪಾಯಿ ಏರಿಕೆ ಕಂಡು ಬಂದಿತ್ತು.

ಸ್ಥಳೀಯ ಆಭರಣ ತಯಾರಕರಲ್ಲಿ ಚಿನ್ನಕ್ಕೆ ಬೇಡಿಕೆ ಹೆಚ್ಚಾಗಿರುವ ಕಾರಣ ಬೆಲೆ ಏರುತ್ತಿದೆ. ಇಂದು 140 ರೂಪಾಯಿ ಏರಿಕೆ ಕಂಡು 10 ಗ್ರಾಂ ಚಿನ್ನದ ಬೆಲೆ 31,340 ರೂಪಾಯಿಯಾಗಿದೆ. ಚಿನ್ನದ ಬೆಲೆ ಏರಿಕೆ ಕಾರಣ ಡಾಲರ್ ಎದುರು ರೂಪಾಯ್ ಮೌಲ್ಯ 71 ರೂಪಾಯಿಯಾಗಿದೆ. ಇದು ಚಿನ್ನದ ಆಮದಿನ ಮೇಲೆ ಪ್ರಭಾವ ಬೀರಲಿದೆ. ಚಿನ್ನದ ಬೆಲೆಯಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

ಹಬ್ಬದ ಕಾರಣ ಬಂಗಾರಕ್ಕೆ ಬೇಡಿಕೆ ಹೆಚ್ಚಾಗಿದೆ. ಆಭರಣ ತಯಾರಕರು ಬಂಗಾರ ಖರೀದಿ ಶುರು ಮಾಡಿದ್ದಾರೆ. ಹಾಗಾಗಿ ಬಂಗಾರದ ಬೆಲೆಯಲ್ಲಿ ಏರಿಕೆ ಕಂಡು ಬರ್ತಿದೆ. ಬೆಳ್ಳಿ ಬೆಲೆಯಲ್ಲಿ ಇಂದು ಯಾವುದೇ ಬದಲಾವಣೆಯಾಗಿಲ್ಲ. ಕೆ.ಜಿ ಬೆಳ್ಳಿ ಬೆಲೆ 38,300 ರೂಪಾಯಿಗೆ ಸ್ಥಿರವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...