alex Certify
ಕನ್ನಡ ದುನಿಯಾ       Mobile App
       

Kannada Duniya

ಎರಡು ದಿನಗಳ ನಂತ್ರ ಮತ್ತೆ ಏರಿಕೆ ಮುಖ ಮಾಡಿದ ಚಿನ್ನ-ಬೆಳ್ಳಿ

ಚಿನ್ನಕ್ಕೆ ಬೇಡಿಕೆ ಹೆಚ್ಚಾಗ್ತಿದ್ದಂತೆ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ದೆಹಲಿ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಗುರುವಾರ ದೊಡ್ಡ ಮಟ್ಟದ ಏರಿಕೆ ಕಂಡು ಬಂದಿದೆ. ಎರಡು ದಿನಗಳ ಇಳಿಕೆ ನಂತ್ರ ಗುರುವಾರ ಬಂಗಾರ 350 ರೂಪಾಯಿ ಹೆಚ್ಚಳ ಕಂಡು 10 ಗ್ರಾಂಗೆ 32,250 ರೂಪಾಯಿಯಾಗಿದೆ.

ಬೆಳ್ಳಿ ಬೆಲೆ 450 ರೂಪಾಯಿ ಏರಿಕೆ ಕಂಡಿದೆ. ಗುರುವಾರ ಕೆ.ಜಿ. ಬೆಳ್ಳಿ ಬೆಲೆ 37,900 ರೂಪಾಯಿಯಾಗಿದೆ. ಜಾಗತಿಕ ಮಟ್ಟದಲ್ಲಾದ ಬೆಳವಣಿಗೆ ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ. ಡಾಲರ್ ಮೌಲ್ಯ 16 ತಿಂಗಳ ನಂತ್ರ ಇಳಿಕೆ ಕಂಡಿದೆ. ಹಾಗಾಗಿ ಚಿನ್ನ ಖರೀದಿದಾರರ ಸಂಖ್ಯೆ ಹೆಚ್ಚಾಗಿದೆ. ಜೊತೆಗೆ ಸ್ಥಳೀಯ ಆಭರಣ ತಯಾರಕರ ಖರೀದಿ ಇದಕ್ಕೆ ಕಾರಣವಾಗಿದೆ.

ಕಳೆದ ಎರಡು ದಿನಗಳಲ್ಲಿ ಬಂಗಾರದ ಬೆಲೆ 250 ರೂಪಾಯಿ ಇಳಿಕೆ ಕಂಡಿತ್ತು. ದೆಹಲಿ ಮಾರುಕಟ್ಟೆಯಲ್ಲಿ ಶೇಕಡಾ 99.9 ಹಾಗೂ ಶೇಕಡಾ 99.5 ಶುದ್ಧ ಚಿನ್ನದ ಬೆಲೆ 10 ಗ್ರಾಂಗೆ 32,250 ರೂಪಾಯಿ ಮತ್ತು 32,100 ರೂಪಾಯಿಯಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...