alex Certify
ಕನ್ನಡ ದುನಿಯಾ       Mobile App
       

Kannada Duniya

ಗುಡ್ ನ್ಯೂಸ್! ಭಾರೀ ಇಳಿಕೆಯಾಯ್ತು ಚಿನ್ನದ ದರ

ನವದೆಹಲಿ: ಚಿನ್ನಾಭರಣ, ಬೆಳ್ಳಿ ಖರೀದಿದಾರರಿಗೆ ಖುಷಿ ಸುದ್ದಿ ಇಲ್ಲಿದೆ. ಶುಕ್ರವಾರ ಚಿನ್ನದ ಬೆಲೆಯಲ್ಲಿ 650 ರೂ. ಹಾಗೂ ಬೆಳ್ಳಿ ಬೆಲೆಯಲ್ಲಿ 600 ರೂ. ಇಳಿಕೆಯಾಗಿದೆ.

ವಿವಿಧ ಕಾರಣಗಳಿಂದಾಗಿ ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಏರುಗತಿಯತ್ತಲೇ ಸಾಗಿತ್ತು. ಆಭರಣ ತಯಾರಕರು ಮತ್ತು ಖರೀದಿದಾರರಿಂದ ಬೇಡಿಕೆ ಕಡಿಮೆಯಾದ ಕಾರಣ, ಚಿನ್ನದ ಬೆಲೆ ಪ್ರತಿ 10 ಗ್ರಾಂ ಗೆ 650 ರೂ. ಕಡಿಮೆಯಾಗಿ, 31,300 ರೂ.ಗೆ ಇಳಿದಿದೆ.

ದೆಹಲಿಯಲ್ಲಿ ಶೇ. 99.9 ಶುದ್ಧತೆಯ 10 ಗ್ರಾಂ ಚಿನ್ನಕ್ಕೆ 31,300 ರೂ., ಶೇ. 99.5 ಶುದ್ಧತೆಯ 10 ಗ್ರಾಂ ಚಿನ್ನಕ್ಕೆ 31,150 ರೂ. ಗೆ ಇಳಿಕೆಯಾಗಿದೆ. ಇನ್ನು ಬೆಳ್ಳಿಯ ಬೆಲೆಯಲ್ಲಿಯೂ ಇಳಿಕೆಯಾಗಿದೆ. ಕೆ.ಜಿ. ಬೆಳ್ಳಿಗೆ 600 ರೂ. ಕಡಿಮೆಯಾಗಿದ್ದು, 39,150 ರೂ. ಗೆ ಇಳಿದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...