alex Certify
ಕನ್ನಡ ದುನಿಯಾ       Mobile App
       

Kannada Duniya

ಹಬ್ಬದ ಋತುವಿನಲ್ಲಿ ಗ್ರಾಹಕರಿಗೆ ‘ಶಾಕ್’ ನೀಡ್ತಿದೆ ಬಂಗಾರ

ಬಂಗಾರದ ಬೆಲೆ ಸತತ ಎರಡನೇ ವಾರವೂ ಏರಿಕೆ ಕಂಡು ಬಂದಿದೆ. ಹಬ್ಬದ ಋತುವಿನಲ್ಲಿ ಸ್ಥಳೀಯ ಆಭರಣ ತಯಾರಕರಿಂದ ಬೇಡಿಕೆ ಹೆಚ್ಚಾದ ಕಾರಣ ಬೆಲೆಯಲ್ಲಿ ಏರಿಕೆಯಾಗ್ತಿದೆ. ಹಿಂದಿನ ವಾರ ದೆಹಲಿ ಆಭರಣ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ 450 ರೂಪಾಯಿ ಏರಿಕೆ ಕಂಡು ಪ್ರತಿ 10 ಗ್ರಾಂ ಚಿನ್ನ 31,350 ರೂಪಾಯಿಗೆ ಮಾರಾಟವಾಗಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ನಂತ್ರ ವಾರಾಂತ್ಯದಲ್ಲಿ ಇಳಿಕೆ ಕಂಡು ಪ್ರತಿ ಔನ್ಸ್ ಬಂಗಾರದ ಬೆಲೆ 1,200.80 ಡಾಲರ್ ಆಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆ ಕಂಡ್ರೂ ಸ್ಥಳೀಯ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಏರಿಕೆ ಕಂಡಿದೆ. ಆಭರಣಕ್ಕೆ ಬೇಡಿಕೆ ಹೆಚ್ಚಾಗುವ ಜೊತೆಗೆ ಡಾಲರ್ ಎದುರು ರೂಪಾಯಿ ಮೌಲ್ಯ 71 ರೂಪಾಯಿಗೆ ಬಂದು ತಲುಪಿರುವುದು ಇದಕ್ಕೆ ಕಾರಣವಾಗಿದೆ.

ಬೆಳ್ಳಿ ಬೆಲೆಯಲ್ಲಿ ಕೂಡ ಹಿಂದಿನ ವಾರ ಏರಿಕೆ ಕಂಡು ಬಂದಿದೆ. ವಾರಾಂತ್ಯದಲ್ಲಿ ಬೆಳ್ಳಿ ಬೆಲೆಯಲ್ಲಿ 100 ರೂಪಾಯಿ ಏರಿಕೆ ಕಂಡು ಪ್ರತಿ ಕಿಲೋ ಬೆಳ್ಳಿ ಬೆಲೆ 38,350 ರೂಪಾಯಿಯಾಗಿದೆ. ಬೆಳ್ಳಿ ನಾಣ್ಯಗಳ ಬೆಲೆ 1000 ರೂಪಾಯಿ ಏರಿಕೆ ಕಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...