alex Certify ಏರುಗತಿಯಲ್ಲೇ ಬಂಗಾರ: ಬೆಚ್ಚಿಬೀಳಿಸುವಂತಿದೆ ದರ, 10 ಗ್ರಾಂಗೆ ಬರೋಬ್ಬರಿ 54 ಸಾವಿರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏರುಗತಿಯಲ್ಲೇ ಬಂಗಾರ: ಬೆಚ್ಚಿಬೀಳಿಸುವಂತಿದೆ ದರ, 10 ಗ್ರಾಂಗೆ ಬರೋಬ್ಬರಿ 54 ಸಾವಿರ

ನವದೆಹಲಿ: ಕೆಲವು ದಿನಗಳಿಂದ ಏರುಗತಿಯಲ್ಲೇ ಸಾಗುತ್ತಿರುವ ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದೆ. ಭಾರೀ ಬೆಲೆ ಏರಿಕೆಯಿಂದಾಗಿ ಚಿನ್ನಾಭರಣ ಖರೀದಿಸಬೇಕೆಂದುಕೊಂಡವರಿಗೆ ಆಘಾತ ಎದುರಾಗಿದೆ.

ಚಿನ್ನದ ದರ ಏರುಗತಿಯಲ್ಲಿ ಮುಂದುವರೆದಿದ್ದು 10 ಗ್ರಾಂ ಚಿನ್ನದ ಬೆಲೆ 54,050 ರೂಪಾಯಿಗೆ ಏರಿಕೆಯಾಗಿದೆ. ಮಂಗಳವಾರ 10 ಗ್ರಾಂ ಶುದ್ಧ ಚಿನ್ನದ ದರ 520 ರೂಪಾಯಿ ಏರಿಕೆಯಾಗಿದ್ದು 54,050 ರೂಪಾಯಿಗೆ ತಲುಪಿದೆ.

ಆಭರಣ ಚಿನ್ನದ ದರ 49,550 ರೂ. ಗೆ ತಲುಪಿದ್ದು, ಚಿನ್ನಾಭರಣ ಖರೀದಿದಾರರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಹೂಡಿಕೆದಾರರಿಗೆ ಚಿನ್ನದ ಬೆಲೆ ಏರಿಕೆಯಿಂದ ಖುಷಿಯಾಗಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...