alex Certify
ಕನ್ನಡ ದುನಿಯಾ       Mobile App
       

Kannada Duniya

ಖರೀದಿದಾರರಿಗೆ ‘ಶಾಕ್’ ನೀಡಿದ ಚಿನ್ನ

ಹಬ್ಬ ಸಮೀಪಿಸುತ್ತಿರುವ ಸಂದರ್ಭದಲ್ಲಿ ಕಳೆದ ಮೂರು ದಿನಗಳಿಂದ ಇಳಿಕೆ ಕಾಣುವ ಮೂಲಕ ಖರೀದಿದಾರರ ಮೊಗದಲ್ಲಿ ಮಂದಹಾಸ ಮೂಡಿಸಿದ್ದ ಚಿನ್ನದ ಬೆಲೆಯಲ್ಲಿ ಶನಿವಾರ ಏರಿಕೆ ಕಂಡಿದೆ.

ಒಂದು ಗ್ರಾಂ ಚಿನ್ನದ ಬೆಲೆ 180 ರೂ. ಏರಿಕೆ ಕಾಣುವ ಮೂಲಕ 10 ಗ್ರಾಂ ಗೆ 30,700 ರೂ. ತಲುಪಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕುಸಿತ ಕಂಡಿದ್ದರೂ ದೇಶಿಯ ವರ್ತಕರು ಖರೀದಿಗೆ ಮುಂದಾಗಿರುವುದೇ ಬೆಲೆ ಏರಿಕೆಗೆ ಕಾರಣವೆನ್ನಲಾಗಿದೆ.

ಬೆಳ್ಳಿ ಬೆಲೆಯಲ್ಲೂ 105 ರೂ. ಏರಿಕೆಯಾಗಿದ್ದು, ಕೆ.ಜಿ. ಗೆ 39,000 ರೂ. ಮುಟ್ಟಿದೆ. ಶ್ರಾವಣ ಮಾಸ ಆರಂಭವಾಗಿದ್ದು, ಇನ್ನು ಮುಂದೆ ಹಬ್ಬಗಳ ಸರಮಾಲೇ ಶುರುವಾಗಲಿದೆ. ಜೊತೆಗೆ ವಿವಾಹ ಸೇರಿದಂತೆ ಶುಭ ಸಮಾರಂಭಗಳಿಗೆ ಈ ದಿನಗಳು ಸೂಕ್ತವಾಗಿರುವುದರಿಂದ ಸ್ಥಳೀಯ ವರ್ತಕರು ಹೆಚ್ಚಿನ ಪ್ರಮಾಣದಲ್ಲಿ ಚಿನ್ನ, ಬೆಳ್ಳಿ ಖರೀದಿಸುತ್ತಿದ್ದಾರೆಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...