alex Certify
ಕನ್ನಡ ದುನಿಯಾ       Mobile App
       

Kannada Duniya

ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿಸಬೇಕೆಂದುಕೊಂಡವರಿಗೆ ಶಾಕಿಂಗ್ ನ್ಯೂಸ್

ಅಹಮದಾಬಾದ್: ಅಕ್ಷಯ ತೃತೀಯದಂದು ಚಿನ್ನಾಭರಣ ಖರೀದಿಸಿದರೆ ಒಳಿತಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿ ಚಿನ್ನಾಭರಣ ವರ್ತಕರು ಆಫರ್ ನೀಡುತ್ತಾರೆ. ಜನ ಕೂಡ ಮುಗಿಬಿದ್ದು ಚಿನ್ನಾಭರಣವನ್ನು ಖರೀದಿಸುತ್ತಾರೆ.

ಆದರೆ, ಈ ಬಾರಿ ಅಕ್ಷಯ ತೃತೀಯದಂದು ಚಿನ್ನ ಖರೀದಿಸಬೇಕೆಂದುಕೊಂಡವರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. 10 ಗ್ರಾಂ ಚಿನ್ನದ ಬೆಲೆ ಅಹಮದಾಬಾದ್ ನಲ್ಲಿ 32,000 ರೂ. ಗಡಿ ದಾಟಿದೆ. ಶನಿವಾರ ಅಹಮದಾಬಾದ್ ನಲ್ಲಿ 10 ಗ್ರಾಂ ಚಿನ್ನ 32,300 ರೂ. ಗೆ ಮಾರಾಟವಾಗಿದೆ.

2016 ರ ಅಕ್ಷಯ ತೃತೀಯದಂದಯ 10 ಗ್ರಾಂ ಚಿನ್ನಕ್ಕೆ 29,860 ರೂ. ಬೆಲೆ ಇತ್ತು. ಸಿರಿಯಾ ಮತ್ತು ಅಮೆರಿಕ ನಡುವಿನ ಬಿಕ್ಕಟ್ಟಿನಿಂದಾಗಿ ಕಳೆದ ವಾರದಿಂದ ಚಿನ್ನದ ಬೆಲೆ ಏರಿಕೆ ಹಾದಿ ಹಿಡಿದಿದೆ. ಚಿನ್ನದ ಬೆಲೆ 30,000 ರೂ. ದಾಟಿದ ಬಳಿಕ ಶನಿವಾರ ಅಹಮದಾಬಾದ್ ನಲ್ಲಿ 32,300 ರೂ. ದರ ಇದ್ದು, ಇತ್ತೀಚಿನ ದಿನಗಳಲ್ಲಿ ಅತ್ಯಧಿಕ ಇದು ಅತ್ಯಧಿಕ ಬೆಲೆಯಾಗಿದೆ.

ಅಕ್ಷಯ ತೃತೀಯ ದಿನ ಸಮೀಪಿಸುತ್ತಿರುವಂತೆಯೇ ಚಿನ್ನದ ಬೆಲೆಯಲ್ಲಿ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...