alex Certify
ಕನ್ನಡ ದುನಿಯಾ       Mobile App
       

Kannada Duniya

ದಂಗಾಗುವಂತಿದೆ ಚಿನ್ನ ಕಳ್ಳ ಸಾಗಣೆ ಪ್ರಮಾಣ

gold bb

ನವದೆಹಲಿ: ಭಾರತ-ಮಯನ್ಮಾರ್ ಗಡಿ ಮೂಲಕ ಮಣಿಪುರ ಮಾರ್ಗವಾಗಿ ಕಳೆದ ಎರಡೂವರೆ ವರ್ಷಗಳಲ್ಲಿ 7,000 ಕೆ.ಜಿ. ಚಿನ್ನ ಕಳ್ಳ ಸಾಗಣೆ ಮಾಡಲಾಗಿದೆ.

ಕಂದಾಯ ವಿಚಕ್ಷಣ ಇಲಾಖೆಯ ಸಿಬ್ಬಂದಿ ಚಿನ್ನ ಕಳ್ಳ ಸಾಗಣೆಯ ಭಾರೀ ಜಾಲವನ್ನು ಭೇದಿಸಿದ್ದು, ಮಯನ್ಮಾರ್ ನಿಂದ ಭಾರತಕ್ಕೆ ಅಕ್ರಮವಾಗಿ ಚಿನ್ನ ಸಾಗಣೆ ಮಾಡಿದ ಪ್ರಕರಣಗಳಲ್ಲಿ ಹಲವರನ್ನು ಬಂಧಿಸಿದ್ದಾರೆ. ಹೀಗೆ ವಶಪಡಿಸಿಕೊಳ್ಳಲಾಗಿರುವ ಅಕ್ರಮ ಸಾಗಣೆಯ ಚಿನ್ನದ ಬೆಲೆ ಸುಮಾರು 2,000 ಕೋಟಿ ರೂ.ಗಳಿಗೂ ಅಧಿಕ.

ಗಡಿಯಲ್ಲಿ ಅಕ್ರಮವಾಗಿ ಚಿನ್ನ ಸಾಗಿಸಿ, ದೇಶದೊಳಗೆ ವಿಮಾನಗಳಲ್ಲಿ ಬೇರೆ ಕಡೆಗೆ ರವಾನೆ ಮಾಡಲಾಗುತ್ತಿತ್ತು ಎಂಬ ಸಂಗತಿ ತನಿಖೆಯಲ್ಲಿ ಗೊತ್ತಾಗಿದೆ. ನವದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಚಕ್ಷಣ ದಳದ ಅಧಿಕಾರಿಗಳು ಇತ್ತೀಚೆಗೆ 10 ಕೆ.ಜಿ. ಚಿನ್ನ ಜಪ್ತಿ ಮಾಡಿದ್ದರು. ಇದರ ಜಾಡು ಹಿಡಿದು ತನಿಖೆ ನಡೆಸಿದಾಗ, ಚಿನ್ನ ಕಳ್ಳ ಸಾಗಣೆ ಮಾಡಿರುವ ಹಲವು ಸಂಗತಿ ಗೊತ್ತಾಗಿವೆ ಎಂದು ಕಂದಾಯ ವಿಚಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...