alex Certify
ಕನ್ನಡ ದುನಿಯಾ       Mobile App
       

Kannada Duniya

ಆಭರಣ ಪ್ರಿಯರಿಗೆ ಬಂಗಾರದ ಸುದ್ದಿ : ಶೀಘ್ರದಲ್ಲೇ ಇಳಿಯಲಿದೆ ಚಿನ್ನದ ಬೆಲೆ

ಬಂಗಾರ ಪ್ರಿಯರಿಗೊಂದು ಖುಷಿ ಸುದ್ದಿ. ಬಂಗಾರ ಖರೀದಿಗೆ ಪ್ಲಾನ್ ಮಾಡ್ತಿದ್ದರೆ ಸ್ವಲ್ಪ ತಡೆಯಿರಿ. ಶೀಘ್ರದಲ್ಲಿಯೇ ಬಂಗಾರದ ಬೆಲೆ ಇಳಿಯಲಿದೆ. ವರ್ಲ್ಡ್ ಗೋಲ್ಡ್ ಕೌನ್ಸಿಲ್ ತನ್ನ ಹೊಸ ವರದಿಯಲ್ಲಿ ಇದನ್ನು ದೃಢಪಡಿಸಿದೆ.

2018ರ ಮೊದಲ ತ್ರೈಮಾಸಿಕದಲ್ಲಿ ಅಂದ್ರೆ ಜನವರಿಯಿಂದ ಮಾರ್ಚ್ ವರೆಗೆ ಬಂಗಾರದ ಬೇಡಿಕೆಯಲ್ಲಿ ಇಳಿಕೆಯಾಗಿದೆ. ತ್ರೈಮಾಸಿಕದಲ್ಲಿ ಬಂಗಾರದ ಬೇಡಿಕೆ ಕೇವಲ 973.5 ಟನ್ ಇತ್ತು. 10 ವರ್ಷಗಳಲ್ಲಿ ಇದು ಅತ್ಯಂತ ಕಡಿಮೆ ಬೇಡಿಕೆಯಾಗಿದೆ. ವರ್ಲ್ಡ್ ಗೋಲ್ಡ್ ಕೌನ್ಸಿಲ್ ವರದಿ ಪ್ರಕಾರ ಮೊದಲ ತ್ರೈಮಾಸಿಕದಲ್ಲಿ ಭಾರತದಲ್ಲಿ ಚಿನ್ನದ ಬೇಡಿಕೆಯಲ್ಲಿ ಶೇಕಡಾ 12ರಷ್ಟು ಇಳಿಕೆಯಾಗಿದೆ.

2018ರ ತ್ರೈಮಾಸಿಕದಲ್ಲಿ 87.7 ಟನ್ ಬಂಗಾರ ಆಭರಣಕ್ಕೆ ಬಳಕೆಯಾಗಿದೆ. 2017ರಲ್ಲಿ ಇದ್ರ ಪ್ರಮಾಣ 99.2 ಟನ್ ಇತ್ತು. 2018ರ ಮೊದಲ ತ್ರೈಮಾಸಿಕದಲ್ಲಿ ಕಡಿಮೆ ಮದುವೆಗಳಾಗಿವೆ. ಕೇವಲ 7 ಮದುವೆ ಮುಹೂರ್ತಗಳಿದ್ದವು. 2017ರಲ್ಲಿ ಮೊದಲ ತ್ರೈಮಾಸಿಕದಲ್ಲಿ 20 ಮುಹೂರ್ತಗಳಿದ್ದವು. ಇದೇ ಬಂಗಾರದ ಬೇಡಿಕೆ ಇಳಿಕೆಗೆ ಕಾರಣ ಎಂದು ತಜ್ಞರು ಹೇಳಿದ್ದಾರೆ.

ವರ್ಲ್ಡ್ ಗೋಲ್ಡ್ ಕೌನ್ಸಿಲ್ ವರದಿ ಪ್ರಕಾರ ಭಾರತದ ಮಾರುಕಟ್ಟೆಯಲ್ಲಿ ಕಡಿಮೆಯಾದ ಬಂಗಾರದ ಬೇಡಿಕೆ ವಿಶ್ವ ಬಂಗಾರದ ಮಾರುಕಟ್ಟೆ ಮೇಲೂ ಪರಿಣಾಮ ಬೀರಿದೆ. ಹೂಡಿಕೆಯಲ್ಲೂ ಬಂಗಾರದ ಬೇಡಿಕೆ ಇಳಿದಿದೆ. ಮೊದಲ ತ್ರೈಮಾಸಿಕದಲ್ಲಿ ಬಂಗಾರದ ಹೂಡಿಕೆ ಶೇಕಡಾ 13ರಷ್ಟು ಇಳಿದಿದೆ.

ವರ್ಲ್ಡ್ ಗೋಲ್ಡ್ ಕೌನ್ಸಿಲ್ ವರದಿ ಆಧರಿಸಿ ಮುಂದಿನ ದಿನಗಳಲ್ಲಿ ಬಂಗಾರದ ಬೆಲೆಯಲ್ಲಿ ಇಳಿಕೆಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜಾಗತಿಕ  ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಇಳಿಯುವ ಸಾಧ್ಯತೆಯಿದೆ. ಇದು ದೇಶಿ ಮಾರುಕಟ್ಟೆ ಮೇಲೂ ಪ್ರಭಾವ ಬೀರಲಿದೆ. ದೇಶಿಯ ಮಾರುಕಟ್ಟೆಯಲ್ಲೂ ಬಂಗಾರದ ಬೆಲೆ ಇಳಿಯುವ ಸಾಧ್ಯತೆಯಿದೆ. ಆದ್ರೆ ದೇಶಿ ಮಾರುಕಟ್ಟೆ ರೂಪಾಯಿ ಮೌಲ್ಯವನ್ನು ಆಧರಿಸಿದೆ ಎಂದು ತಜ್ಞರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...