alex Certify
ಕನ್ನಡ ದುನಿಯಾ       Mobile App
       

Kannada Duniya

ಚಿನ್ನ ಖರೀದಿದಾರರಿಗೆ ಒಂದು ಮಾಹಿತಿ

ನವದೆಹಲಿ: ಚಿನ್ನ ಖರೀದಿಗೆ ಸಂಬಂಧಿಸಿದ ಹೊಸ ಮಿತಿಯನ್ನು ಜಾರಿಗೆ ತರಲು ಮುಂದಾಗಿರುವ ಕೇಂದ್ರ ಸರ್ಕಾರ, ಪರಿಷ್ಕೃತ ಆದೇಶ ಹೊರಡಿಸಲು ಉತ್ಸುಕವಾಗಿದೆ.

50,000 ರೂ.ಗಿಂತ ಮೇಲ್ಪಟ್ಟ ಚಿನ್ನಾಭರಣ ಖರೀದಿಗೆ ಪ್ಯಾನ್ ಕಾರ್ಡ್ ಕಡ್ಡಾಯ ಎಂಬ ನಿಯಮವನ್ನು ಸರಕು ಮತ್ತು ಸೇವಾ ತೆರಿಗೆ ಮಂಡಳಿ(ಜಿ.ಎಸ್.ಟಿ.) ರದ್ದುಗೊಳಿಸಿದೆ.

ಇದರಿಂದಾಗಿ ಗ್ರಾಹಕರು ಮತ್ತು ಚಿನ್ನಾಭರಣ ವರ್ತಕರು ನಿರಾಳರಾಗಿರುವ ಬೆನ್ನಲ್ಲೇ ಕಂದಾಯ ಕಾರ್ಯದರ್ಶಿ ಹಸ್ಮುಖ್ ಆದಿಯಾ ನೀಡಿರುವ ಹೇಳಿಕೆ ಗಮನಸೆಳೆದಿದೆ. ಚಿನ್ನ ಖರೀದಿಗೆ ಸಂಬಂಧಿಸಿದ ಹೊಸ ಮಿತಿಯನ್ನು ಸದ್ಯದಲ್ಲೇ ಪ್ರಕಟಿಸುವುದಾಗಿ ಆದಿಯಾ ಹೇಳಿದ್ದಾರೆ.

ಚಿನ್ನ ಖರೀದಿ ಮಿತಿ ಕುರಿತಾಗಿ ಜಾರಿಗೆ ತಂದ ನಿಯಮದಿಂದ ಗೊಂದಲವಾದ ಹಿನ್ನಲೆಯಲ್ಲಿ ಸರ್ಕಾರ ನಿಯಮ ರದ್ದುಪಡಿಸಿದೆ. ಶೀಘ್ರವೇ ಚಿನ್ನ ಖರೀದಿ ಮಿತಿ ಕುರಿತಾದ ಹೊಸ ನಿಯಮ ಪ್ರಕಟಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಬ್ಯಾಂಕ್ ಗಳಲ್ಲಿ ಗ್ರಾಹಕರು 50,000 ರೂ. ಮತ್ತು ಮೇಲ್ಪಟ್ಟ ವಹಿವಾಟು ನಡೆಸಿದಾಗ, ಮಾಹಿತಿಯನ್ನು ತೆರಿಗೆ ಇಲಾಖೆಗೆ ನೀಡಬೇಕಿದೆ. ಇದನ್ನೇ ಚಿನ್ನಾಭರಣ  ವ್ಯಾಪಾರಿಗಳಿಗೂ ಅನ್ವಯಿಸಲಾಗಿತ್ತು. ಸದ್ಯದಲ್ಲೇ ಚಿನ್ನ ಖರೀದಿ ಮಿತಿ ಕುರಿತಾಗಿ ಪರಿಷ್ಕೃತ ಆದೇಶ ಹೊರಡಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...