alex Certify
ಕನ್ನಡ ದುನಿಯಾ       Mobile App
       

Kannada Duniya

ಗುಡ್ ನ್ಯೂಸ್: ಮೂರನೇ ವಾರವೂ ಇಳಿಕೆಯಾಯ್ತು ಬಂಗಾರದ ಬೆಲೆ

ಸತತ ಮೂರನೇ ವಾರವೂ ಬಂಗಾರದ ಬೆಲೆಯಲ್ಲಿ ಕುಸಿತ ಕಂಡು ಬಂದಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಆಭರಣ ತಯಾರಕರಿಂದ ಬೇಡಿಕೆ ಕುಸಿತ ಹಾಗೂ ಜಾಗತಿಕ ಮಟ್ಟದಲ್ಲಿ ದುರ್ಬಲ ಬೆಳವಣಿಗೆ ಬಂಗಾರದ ಬೆಲೆ ಇಳಿಕೆಗೆ ಕಾರಣವಾಗಿದೆ. ಬೆಳ್ಳಿ ಬೆಲೆಯಲ್ಲಿ ಕೂಡ ಕಳೆದ ಮೂರು ವಾರಗಳಿಂದ ಇಳಿಕೆ ಕಂಡು ಬರ್ತಿದೆ.

ದೆಹಲಿಯಲ್ಲಿ ಕಳೆದ ವಾರ 190 ರೂಪಾಯಿ ಇಳಿಕೆಯೊಂದಿಗೆ ಬಂಗಾರದ ಬೆಲೆ ಪ್ರತಿ 10 ಗ್ರಾಂಗೆ 30,780 ರೂಪಾಯಿಯಾಗಿದೆ. ಇನ್ನು ಬೆಳ್ಳಿ ಬೆಲೆ 30 ರೂಪಾಯಿ ನಷ್ಟದೊಂದಿಗೆ 39,225 ರೂಪಾಯಿ ಪ್ರತಿ ಕಿಲೋ ಆಗಿದೆ. ಜಾಗತಿಕ ಮಾರುಕಟ್ಟೆ ನ್ಯೂಯಾರ್ಕ್ ನಲ್ಲಿ ಬಂಗಾರ ಭಾನುವಾರ ಪ್ರತಿ ಔನ್ಸ್ ಗೆ 1,223.20 ಡಾಲರ್ ಆಗಿದೆ. ಬೆಳ್ಳಿ ಪ್ರತಿ ಔನ್ಸ್ ಗೆ 15.47 ಡಾಲರ್ ಗೆ ಬಂದು ನಿಂತಿದೆ.

ಹೊಸ ವಾರದಲ್ಲಿ ಬೆಲೆ ಏರಲಿದ್ಯಾ ಇಲ್ಲ ಮತ್ತಷ್ಟು ಬೆಲೆ ಇಳಿಕೆಯಾಗಲಿದ್ಯಾ ಎಂಬುದನ್ನು ಕಾದು ನೋಡಬೇಕಿದೆ. ಬಂಗಾರ ಖರೀದಿದಾರರಿಗೆ ಇದು ಒಳ್ಳೆ ಸಮಯವಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...