alex Certify
ಕನ್ನಡ ದುನಿಯಾ       Mobile App
       

Kannada Duniya

8 ವರ್ಷದಲ್ಲೇ ಚಿನ್ನದ ಬೇಡಿಕೆ ಇಳಿಕೆ

ಮುಂಬೈ: ಕಳೆದ 8 ವರ್ಷಗಳಲ್ಲಿಯೇ ಚಿನ್ನದ ಬೇಡಿಕೆ 2017 ರಲ್ಲಿ ಕಡಿಮೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಖರೀದಿಗೆ ಆಸಕ್ತಿ ಇಲ್ಲದ ಕಾರಣ ಬೇಡಿಕೆ ಕಡಿಮೆಯಾಗಿದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್(WGC) ಹೇಳಿದೆ.

ಭಾರತ ಚಿನ್ನದ ಬೇಡಿಕೆಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಚೀನಾ ನಂತರದ ಸ್ಥಾನದಲ್ಲಿದೆ. ಚಿನ್ನದ ಬೇಡಿಕೆ ಇರಬೇಕಾದ ಭಾರತದಲ್ಲಿಯೇ ಈ ಬಾರಿ ಬೇಡಿಕೆ ಕುಸಿದಿದೆ.

ಕಳೆದ 10 ವರ್ಷಗಳ ಸರಾಸರಿ ಗಮನಿಸಿದಾಗ 845 ಟನ್ ಗಳಷ್ಟು ಚಿನ್ನದ ಬೇಡಿಕೆ ಇದೆ. 2017 ರಲ್ಲಿ ಭಾರತೀಯರ ಬೇಡಿಕೆ 650 ಟನ್ ಗಳಷ್ಟಿದೆ. 2016 ರಲ್ಲಿ ಬೇಡಿಕೆ 666.1 ಟನ್ ಗಳಷ್ಟಿತ್ತು ಎಂದು WGC ಭಾರತೀಯ ಕಾರ್ಯಾಚರಣೆಗಳ ವ್ಯವಸ್ಥಾಪಕ ನಿರ್ದೇಶಕ ಸೋಮಸುಂದರಂ ತಿಳಿಸಿದ್ದಾರೆ.

ಜುಲೈನಲ್ಲಿ ದೇಶವ್ಯಾಪಿ ಜಿ.ಎಸ್.ಟಿ. ಜಾರಿಯಾಗಿದ್ದು, ಚಿನ್ನದ ಮೇಲಿನ ತೆರಿಗೆ ಏರಿಕೆಯಾಗಿದೆ. ಜುಲೈ –ಸೆಪ್ಟಂಬರ್ ಅವಧಿಯ ತ್ರೈಮಾಸಿಕದಲ್ಲಿ ಚಿನ್ನದ ಬೇಡಿಕೆ ಕುಸಿದಿದೆ.

ಅಕ್ಟೋಬರ್ ಮತ್ತು ಡಿಸೆಂಬರ್ ತ್ರೈಮಾಸಿಕದಲ್ಲಿ ಬೇಡಿಕೆ ಹೆಚ್ಚಾಗಬಹುದೆಂದು ಹೇಳಲಾಗಿದೆ. ಹಬ್ಬದ ವೇಳೆ ಚಿನ್ನ, ಬೆಳ್ಳಿ ಖರೀದಿ ಮಂಗಳಕರವೆಂದು ಭಾವಿಸಲಾಗಿದೆ. ಇದರೊಂದಿಗೆ ಮದುವೆ ಸೀಸನ್ ಕೂಡ ಇರುವುದರಿಂದ ಚಿನ್ನದ ಬೇಡಿಕೆ ಹೆಚ್ಚಾಗಲಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...