alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ ಚಿನ್ನ ಖರೀದಿ ಕುರಿತಾದ ಒಂದು ಸುದ್ದಿ

gold-pr

ಮುಂಬೈ: ಭಾರತದ ಚಿನ್ನದ ಬೇಡಿಕೆ ಶೇ. 15 ರಷ್ಟು ಹೆಚ್ಚಳವಾಗಿದೆ. ದೊಡ್ಡ ಮೊತ್ತದ ನೋಟ್ ಬ್ಯಾನ್ ಮಾಡಿದ್ದು ಹಾಗೂ ಅಘೋಷಿತ ಸಂಪತ್ತಿನ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿದ್ದರಿಂದ ಚಿನ್ನ ಖರೀದಿ ಹೆಚ್ಚಾಗಲು ಕಾರಣವಾಗಿದೆ.

2017 ರ ಮೊದಲ ತ್ರೈ ಮಾಸಿಕದಲ್ಲಿ ಚಿನ್ನದ ಬೇಡಿಕೆ ಶೇ. 15 ರಷ್ಟು ಹೆಚ್ಚಾಗಿ 123.5 ಟನ್(ಮೌಲ್ಯ 32,420 ಕೋಟಿ ರೂ.) ತಲುಪಿದೆ. 2016 ರ ಮೊದಲ ತ್ರೈ ಮಾಸಿಕದಲ್ಲಿ 107.3(ಮೌಲ್ಯ 27540 ಕೋಟಿ ರೂ.) ಟನ್ ಬೇಡಿಕೆ ಇತ್ತು.

ಇನ್ನು ಚಿನ್ನಾಭರಣ ಬೇಡಿಕೆಯಲ್ಲಿಯೂ ಶೇ. 16 ರಷ್ಟು ಏರಿಕೆಯಾಗಿದೆ. 2016 ರ ಮೊದಲ ತ್ರೈಮಾಸಿಕದಲ್ಲಿ 79.8 ಟನ್( ಮೌಲ್ಯ 20,484 ಕೋಟಿ ರೂ.) ಬೇಡಿಕೆ ಇದ್ದ ಚಿನ್ನಾಭರಣ 2017 ರ ಮೊದಲನೇ ತ್ರೈಮಾಸಿಕದಲ್ಲಿ 92.3 ಟನ್(ಮೌಲ್ಯ 24,220 ಕೋಟಿ ರೂ.) ಮಾರಾಟವಾಗಿದೆ.

ವಿಶ್ವ ಚಿನ್ನ ಮಂಡಳಿ ಈ ಮಾಹಿತಿಯನ್ನು ನೀಡಿದ್ದು, ಚಿನ್ನದ ಆಮದು ಪ್ರಮಾಣದಲ್ಲಿ ಶೇ. 112 ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದೆ.

ಹೂಡಿಕೆದಾರರು ಚಿನ್ನ ಖರೀದಿಗೆ ಆಸಕ್ತಿ ತೋರಿರುವುದು ಹಾಗೂ ಚಿನ್ನಾಭರಣ ಖರೀದಿಸುವವರ ಸಂಖ್ಯೆ ಏರಿಕೆಯಾಗತೊಡಗಿದೆ ಎಂದು ವಿಶ್ವ ಚಿನ್ನ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...